

ಕೆ.ಆರ್.ಪೇಟೆ: ತಾಲೂಕಿನ ಮಡುವಿನಕೋಡಿ ಗ್ರಾ.ಪಂ ಉಪಾಧ್ಯಕ್ಷರಾಗಿ ಮನ್‌ಮುಲ್ ನಿರ್ದೇಶಕ ಎಂ.ಬಿ.ಹರೀಶ್ ಬೆಂಬಲಿಗ ನಾಗರಾಜು ಅವಿರೋಧವಾಗಿ ಆಯ್ಕೆಯಾದರು.
ಎಂ.ಕೆ.ರತಿ ಮಹದೇವ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಡೆಯಿತು. ನಾಗರಾಜು ಹೊರತುಪಡಿಸಿ ಬೇರಾರೂ ನಾಮಪತ್ರ ಸಲ್ಲಿಸದ ಕಾರಣ ನಾಗರಾಜು ಅವರನ್ನು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಆನಂದ್ ಘೋಷಣೆ ಮಾಡಿದರು. ಸಹ ಚುನಾವಣಾಧಿಕಾರಿಯಾಗಿ ಪಿಡಿಒ ಮಹೇಶ್ ಕಾರ್ಯನಿರ್ವಹಿಸಿದರು.
ನೂತನ ಉಪಾಧ್ಯಕ್ಷ ನಾಗರಾಜು ಅವರನ್ನು ಆಡಳಿತ ಮಂಡಳಿಯ ಸದಸ್ಯರು ಹಾಗೂ ಪಂಚಾಯಿತಿ ಮುಖಂಡರು ಅಭಿನಂದಿಸಿದರು.
ಅಧ್ಯಕ್ಷೆ ಪ್ರೀತಿ ಬೈರನಾಯಕ್, ಮಾಜಿ ಅಧ್ಯಕ್ಷ ಮಂಜುನಾಥ್, ಬಸವರಾಜು , ವಿಶಾಲಾಕ್ಷಮ್ಮ ಪ್ರಕಾಶ್, ಗೌರಮ್ಮ, ಮಂಜುಳಾ, ಚಂದ್ರಹಾಸ, ಶಿವಕುಮಾರ್, ರವಿಕುಮಾರ್, ಬಿ.ಬಾಚಹಳ್ಳಿ ಯೋಗೇಂದ್ರ, ಮಡವಿನಕೋಡಿ ಅಶೋಕ್, ನಾಗರಾಜು, ರಾಜು, ಮಹೇಶ್, ಪ್ರವೀಣ್, ನಾಗೇಶ್ ಇದ್ದರು.