

ಕೊಳ್ಳೇಗಾಲ: ಪಟ್ಟಣದ ಆಂಧ್ರ ದೇವಾಂಗ ಕುಲದ ನೂತನ ಯಜಮಾನರಾಗಿ ನಾಗರಾಜಯ್ಯ ಅಚ್ಗಾಳ್ ಅವರನ್ನು ಕುಲದ ಗುರುಗಳು, ಸಮಾಜದ ಶೆಟ್ಟಿಗಾರರು ಮತ್ತು ಕುಲಸ್ಥರ ಸಮ್ಮುಖದಲ್ಲಿ ಆಯ್ಕೆ ಮಾಡಲಾಯಿತು.
ಶ್ರೀ ರಾಮಲಿಂಗ ಚೌಡೇಶ್ವರಿ ದೇವಾಲಯದಲ್ಲಿ ಭಾನುವಾರ ಕರೆಯಲಾಗಿದ್ದ ಆಂಧ್ರ ದೇವಾಂಗ ಸಮಾಜದ ಮಹಾಸಭೆಯಲ್ಲಿ ದೇವಾಂಗ ಸಮಾಜದ ಕುಲಗುರುಗಳಾದ ಮಹೇಶ್ ಸ್ವಾಮಿ, ಮಲ್ಲಿಕಾರ್ಜುನ ಸ್ವಾಮಿ, ಆಚಾರ್ಯ ವರ್ಗ, ಶೆಟ್ಟಿಗಾರರು, ದೇವಾಂಗ ಪೇಟೆಯ ವಿವಿಧ ಬೀದಿಯ ಎಜೆಂಟರು ಮತ್ತು ಕುಲಸ್ಥರು ಒಮ್ಮತದಿಂದ ನಾಗರಾಜಯ್ಯ ಅಚ್ಗಾಳ್ ಅವರನ್ನು ದೇವಾಂಗ ಕುಲದ ಯಜಮಾನರಾಗಿ ಆಯ್ಕೆ ಮಾಡಿದರು. ಈ ವೇಳೆ ನಾಗರಾಜಯ್ಯ ಅಚ್ಗಾಳ್ ಅವರನ್ನು ಸಮಾಜದ ಕುಲಸ್ಥರು ಹಾರ ಹಾಕಿ ಅಭಿನಂದಿಸಿ ಸನ್ಮಾನಿಸಿದರು.
ದೇವಾಂಗ ಸಮಾಜದ ಶೆಟ್ಟಿಗಾರರಾದ ಸುಬ್ರಹ್ಮಣ್ಯ, ಡಿ.ಜಿ.ಸುರೇಶ್, ಶ್ರೀನಿವಾಸ್ ಶಾಸ್ತ್ರಿ, ವೀರಭದ್ರಯ್ಯ, ಕನಕರಾಜು, ಮುರುಳಿ, ಧನಪಾಲ್, ಮುಖಂಡರಾದ ಎ.ಪಿ.ಶಂಕರ್, ಕೆ.ಆರ್.ಕೆ ವೇಣು ಗೋಪಾಲ್, ಶ್ರೀಚೌಡೇಶ್ವರಿ ಮತ್ತು ಶ್ರೀರಾಜರಾಜೇಶ್ವರಿ ಶಾಲೆಯ ಅಧ್ಯಕ್ಷ ರಾಜು, ಅರುಣಾಚಲೇಶ್ವರ ಟ್ರಸ್ಟ್ ಅಧ್ಯಕ್ಷ ಸುಂದ್ರೇಶ್, ಟಿ.ಎಸ್. ಸುಂದ್ರಯ್ಯ, ಟಿ.ಆರ್.ನಾರಾಯಣ, ರಾಜೇಶ್ ಇತರರು ಇದ್ದರು.