

ಬೆಂಗಳೂರು: ಗಾಯಕ ನಗರ ಶ್ರೀನಿವಾಸ್ ಉಡುಪ ಅವರ ಹುಟ್ಟುಹಬ್ಬದ ಅಂಗವಾಗಿ ಗಾಂಧಾರ್ ವತಿಯಿಂದ 27ರಂದು ಸಂಜೆ 6.30ಕ್ಕೆ ನಗರದ ಪುರಭವನದಲ್ಲಿ ‘ಶ್ರೀನಿವಾಸ ಉಡುಪ - 75’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶಾಸಕ ಉದಯ ಗರುಡಾಚಾರ್, ಲಹರಿ ಆಡಿಯೋ ಸಂಸ್ಥೆಯ ವೇಲು, ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಅಧ್ಯಕ್ಷ ವೈ.ಕೆ. ಮುದ್ದುಕೃಷ್ಣ, ಸಾಹಿತಿ ಪ್ರೊ. ಹಂಪ ನಾಗರಾಜಯ್ಯ, ಕವಿ ಬಿ.ಆರ್. ಲಕ್ಷ್ಮಣರಾವ್ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ ಗಾಯಕಿಯರಾದ ರತ್ನಮಾಲಾ ಪ್ರಕಾಶ್, ಮಂಜುಳಾ ಗುರುರಾಜ್, ಬಿ.ಆರ್. ಛಾಯಾ, ಮಾಲತಿ ಶರ್ಮ, ಇಂದೂ ವಿಶ್ವನಾಥ್ ಅವರನ್ನು ಸನ್ಮಾನಿಸಲಾಗುವುದು. ನಗರ ಶ್ರೀನಿವಾಸ ಉಡುಪ, ಅರ್ಚನಾ ಉಡುಪ, ರೆಮೋ, ಉದಯ್ ಅಂಕೋಲಾ, ಶ್ರೀನಿವಾಸ್ ಮೂರ್ತಿ, ಪ್ರವೀಣ್, ಪ್ರದೀಪ್ ಗಾಯನ ಪ್ರಸ್ತುತಪಡಿಸಲಿದ್ದಾರೆ.