ನಾಗರಕಟ್ಟೆಗಳಿಗೆ ವಿಶೇಷ ಪೂಜೆ

9 nrp 3 nagrapanchami
ಎನ್.ಆರ್.ಪುರದ ಹಳೇ ಅಂಚೆ ಕಚೇರಿ ರಸ್ತೆಯಲ್ಲಿನ ನಾಗರಕಟ್ಟೆಗೆ ಭಕ್ತಾದಿಗಳು ವಿಶೇಷ ಪೂಜೆ ಸಲ್ಲಿಸಿದರು.
Published on

ಎನ್.ಆರ್.ಪುರ: ನಾಗರ ಪಂಚಮಿ ಪ್ರಯುಕ್ತ ಅಗ್ರಹಾರದ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ ಹಾಗೂ ವಿವಿಧ ನಾಗರಕಟ್ಟೆಗಳಲ್ಲಿ ಶುಕ್ರವಾರ ವಿಶೇಷ ಪೂಜೆ ನಡೆಯಿತು.
ಅಗ್ರಹಾರದ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ನೂರಾರು ಭಕ್ತರು ಆಗಮಿಸಿ ಹಣ್ಣು ಕಾಯಿ ಸರ್ಮಪಿಸಿ ಪೂಜೆ ಸಲ್ಲಿಸಿದರು. ಪವಮಾನ ಅಭಿಷೇಕ, ಎಳನೀರು ಅಭಿಷೇಕ, ಕ್ಷೀರಾಭಿಷೇಕ ನಡೆಯಿತು. ಸುಬ್ರಹ್ಮಣ್ಯಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ವಿಶೇಷವಾಗಿ ಎನ್.ಆರ್.ಪುರ ಶ್ರೀ ವಿರಾಟ್ ವಿಶ್ವಕರ್ಮ ಚಂಡೆ ಬಳಗದವರು ಚಂಡೆ ಬಾರಿಸಿ ಚಂಡೆ ಸೇವೆ ಸಲ್ಲಿಸಿದರು.
ರಾಘವೇಂದ್ರ ಬಡಾವಣೆಯ ಶಕ್ತಿ ಶ್ರೀ ನಾಗದೇವರ ಸನ್ನಿಧಿಯಲ್ಲೂ ನಾಗನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಭಕ್ತರು ಎಳನೀರು, ಕ್ಷೀರಾಭಿಷೇಕ ಮಾಡಿಸಿ ಹಣ್ಣು, ಕಾಯಿ ಪೂಜೆ ಸಲ್ಲಿಸಿದರು. ಶಿವಮೊಗ್ಗ ರಸ್ತೆಯ ಅಯ್ಯಪ್ಪಸ್ವಾಮಿ ದೇವಸ್ಥಾನದ ನಾಗ ದೇವರ ಸನ್ನಿಧಿಯಲ್ಲೂ ವಿಶೇಷ ಪೂಜೆ ಸಲ್ಲಿಸಲಾಯಿತು. ಗುತ್ಯಮ್ಮ ದೇವಸ್ಥಾನದ ನಾಗನ ಸನ್ನಿಧಿಯಲ್ಲೂ ವಿಶೇಷ ಪೂಜೆ ನಡೆಯಿತು.
ಹಿಳುವಳ್ಳಿ ರಸ್ತೆಯಲ್ಲಿನ ನಾಗರಕಟ್ಟೆಯಲ್ಲಿ ಭಕ್ತರು ಪೂಜೆ ಸಲ್ಲಿಸಿದರು. ಹಳೇ ಅಂಚೆ ಕಚೇರಿ ರಸ್ತೆಯ ನಾಗರಕಟ್ಟೆಗೂ ಭಕ್ತರು ಪೂಜೆ ಸಲ್ಲಿಸಿದರು. ಗ್ರಾಮೀಣ ಭಾಗದಲ್ಲೂ ನಾಗರಕಟ್ಟೆ, ಅಶ್ವತ್ಥ ಕಟ್ಟೆಗಳಿಗೆ ತನಿ ಎರೆದು, ಅರಿಶಿಣ ಹಚ್ಚಿ, ಎಳನೀರು ಅಭಿಷೇಕ ಮಾಡಿಸಿ ಪೂಜೆ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net