

ಗುಂಡ್ಲುಪೇಟೆ: ಇಲ್ಲಿನ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಸಮೀಪದಲ್ಲಿರುವ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವರಿಗೆ ಮಂಗಳವಾರ ನಾಗರ ಪಂಚಮಿ ಪ್ರಯುಕ್ತ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು.
ಪ್ರಧಾನ ಅರ್ಚಕ ರವಿ ಜೋಯಿಸ್ ಅವರ ನೇತೃತ್ವದಲ್ಲಿ ದೇವಾಲಯವನ್ನು ತಳಿರು, ತೋರಣ ಹಾಗೂ ವಿದ್ಯುತ್ ದೀಪದಿಂದ ಅಲಂಕಾರ ಮಾಡಿ ಗರ್ಭಗುಡಿಯಲ್ಲಿರುವ ಷಣ್ಮುಖ ಸ್ವಾಮಿಗೆ ವಿವಿಧ ಹೂಗಳು ಹಾಗೂ ಹಣ್ಣು, ನವಿಲಿನ ಗರಿಯಿಂದ ಮತ್ತು ಆಭರಣಗಳಿಂದ ವಿಶೇಷವಾಗಿ ಅಲಂಕಾರ ಮಾಡಿ ಪೂಜೆ ಮತ್ತು ಮಂಗಳಾರತಿ ನೆರವೇರಿಸಲಾಯಿತು. ಈ ಪೂಜಾ ಕಾರ್ಯಕ್ರಮದಲ್ಲಿ ಪಟ್ಟಣದ ವಿವಿಧ ಬಡಾವಣೆಯ ಭಕ್ತರು ಹಾಜರಿದ್ದು, ಷಣ್ಮುಖಸ್ವಾಮಿಯ ದರ್ಶನ ಪಡೆದರು.