ಅಣ್ಣಿಗೇರಿಯಲ್ಲಿ ನಾಗರ ಪಂಚಮಿ ಸಡಗರ

8 ANG 1
Published on

ಅಣ್ಣಿಗೇರಿ: ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳಲ್ಲಿ ಗುರುವಾರ ನಾಗರ ಪಂಚಮಿಯನ್ನು ನಾಗದೇವತೆಗೆ ಹಾಲು ಎರೆಯುವ ಮೂಲಕ ಆಚರಿಸಲಾಯಿತು.


ಬುಧವಾರ ರೊಟ್ಟಿ ಪಂಚಮಿಯನ್ನು ಮಹಿಳೆಯರು ಸಂಭ್ರಮದಿಂದ ಆಚರಿಸಿದರು. ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆ ಉತ್ತರ ಕರ್ನಾಟಕದಲ್ಲಿ ನಾನಾ ಹಬ್ಬಗಳಿಗೆ ಮುನ್ನುಡಿ ಬರೆಯಲಾಗುತ್ತದೆ.

ತಿಂಗಳ ಪೂರ್ತಿ ಮನೆಯಲ್ಲಿ ಒಂದಿಲ್ಲೊಂದು ಪೂಜೆ, ವ್ರತ ಕೈಗೊಳ್ಳುತ್ತಾರೆ ಅದರಲ್ಲೂ ಆರಂಭದಲ್ಲೇ ಬರುವ ಪಂಚಮಿ ಹಬ್ಬದ ರೊಟ್ಟಿ ಸಂಭ್ರಮ ಉತ್ತರ ಕರ್ನಾಟಕದಲ್ಲಿ ವೈಶಿಷ್ಯತೆ ಪಡೆದುಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net