ಭಜನಾ ಮಂದಿರದಿಂದ ಧರ್ಮಕ್ಕೆ ಶಕ್ತಿ : ಶಾಸಕ ಅಶೋಕ್‌ಕುಮಾರ್ ರೈ ಅನಿಸಿಕೆ

New Project (32)
Published on

ಪುತ್ತೂರು ಗ್ರಾಮಾಂತರ: ಧರ್ಮದ ಉಳಿವಿಗಾಗಿ ಧಾರ್ಮಿಕ ಕೇಂದ್ರಗಳು ಬೇಕು. ಭಜನಾ ಮಂದಿರ ಧರ್ಮಕ್ಕೆ ಶಕ್ತಿ ತುಂಬುವ ಕೇಂದ್ರಗಳಾಗಿವೆ. ಭಜನಾ ಮಂದಿರ, ಧಾರ್ಮಿಕ ಕೇಂದ್ರಗಳನ್ನು ಉಳಿಸುವ ಜತೆಗೆ ನಮ್ಮ ಮಕ್ಕಳಿಗೆ ಧಾರ್ಮಿಕ ವಿಚಾರ ಹೇಳಿಕೊಡುವ ಕೆಲಸ ಆಗಬೇಕಿದೆ ಎಂದು ಶಾಸಕ ಅಶೋಕ್‌ಕುಮಾರ್ ರೈ ಹೇಳಿದರು.

ಬೆಟ್ಟಂಪಾಡಿ ವಿನಾಯಕ ನಗರದ ಶ್ರೀಸಿದ್ಧಿ ವಿನಾಯಕ ಸೇವಾ ಸಂಘ 24ನೇ ವಾರ್ಷಿಕೋತ್ಸವ ಅಂಗವಾಗಿ ನಡೆದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ನಗರ ಭಜನಾ ಮಂಗಲೋತ್ಸವ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಲ್ನಾಡು ದುರ್ಗಾಶ್ರೀ ಭಜನಾ ಮಂಡಳಿ ಅಧ್ಯಕ್ಷೆ ಪರಮೇಶ್ವರಿ ಬಿ.ಆರ್.ಭಜನಾ ಕಾರ್ಯಕ್ರಮ ಚಾಲನೆ ನೀಡಿದ್ದರು. ಪ್ರಗತಿಪರ ಕೃಷಿಕ ವಿಶ್ವನಾಥ ರೈ ಕಡಮಾಜೆೆ, ಸನ್ಮಾನ ಸ್ವೀಕರಿಸಿದ ಜೇನು ತರಬೇತುದಾರ ರಾಧಾಕೃಷ್ಣ ಆರ್.ಕೋಡಿ ಮಾತನಾಡಿದರು. ಬೆಟ್ಟಂಪಾಡಿ ಗ್ರಾಪಂ ಉಪಾಧ್ಯಕ್ಷ ಮಹೇಶ್ ಕೋರ್ಮಂಡ ಅಧ್ಯಕ್ಷತೆ ವಹಿಸಿದ್ದರು. ಸಿದ್ಧಿ ವಿನಾಯಕ ಸೇವಾ ಸಮಿತಿ ಗೌರವಾಧ್ಯಕ್ಷ ನಾರಾಯಣ ಮನೋಳಿತ್ತಾಯ ಕಾಜಿಮೂಲೆ, ಅಧ್ಯಕ್ಷ ಶ್ರೀಕುಮಾರ್ ಭಟ್ ಅಡ್ಯೆತ್ತಿಮಾರ್, ಭಜನಾ ಮಂದಿರ ಪುನಃ ನಿರ್ಮಾಣ ಸಮಿತಿ ಗೌರವಾಧ್ಯಕ್ಷ ರಾಧಾಕೃಷ್ಣ ಭಟ್ ಕಕ್ಕೂರು, ನಾಟಿ ವೈದ್ಯ ಗಂಗಾಧರ್ ಕೆ.ಎನ್., ನೋಟರಿ ವಕೀಲ ಚಿದಾನಂದ ಬೈಲಾಡಿ ಉಪಸ್ಥಿತರಿದ್ದರು.

ಜೇನು ತರಬೇತುದಾರ ರಾಧಾಕೃಷ್ಣ ಆರ್.ಕೋಡಿ, ಗಾಯಕಿ ಸಿಂಚನಾ ಎಂ.ಗೌಡ ಅವರನ್ನು ಸನ್ಮಾನಿಸಲಾಯಿತು.

ಶ್ರೀಸಿದ್ಧಿ ವಿನಾಯಕ ಭಜನಾ ಮಂದಿರ ಪುನಃ ನಿರ್ಮಾಣ ಸಮಿತಿ ಅಧ್ಯಕ್ಷ ಜಯಪ್ರಕಾಶ್ ರೈ ಸ್ವಾಗತಿಸಿದರು. ಸಿದ್ಧಿ ವಿನಾಯಕ ಸೇವಾ ಸಂಘ ಕಾರ್ಯದರ್ಶಿ ಗಣೇಶ್ ಪಂಬೆಜಾಲು ವಂದಿಸಿದರು. ಯತೀಶ್ ಕುಲಾಲ್ ಕೋರ್ಮಂಡ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net