ನಾಗನಾಥೇಶ್ವರ ರಥದ ಗಡ್ಡೆ ಹೊರಕ್ಕೆ

xr:d:DAGCGvEy6-c:2,j:5378848379501431878,t:24041110
xr:d:DAGCGvEy6-c:2,j:5378848379501431878,t:24041110
Published on

ಸಿರಿಗೇರಿ: ಗ್ರಾಮದ ಆರಾಧ್ಯ ದೈವ ಶ್ರೀ ನಾಗನಾಥೇಶ್ವರ ದೇವಸ್ಥಾನದ ರಥೋತ್ಸವ ಏ.15 ರಂದು ಜರುಗಲಿದ್ದು, ಯುಗಾದಿ ಹಬ್ಬದ ದಿನವಾದ ಮಂಗಳವಾರ ರಥ ಗಡ್ಡೆಯನ್ನು ಹೊರಗೆ ಎಳೆಯಲಾಯಿತು.

ನಂತರ ನಾಗನಾಥೇಶ್ವರ ದೇವಸ್ಥಾನದ ಆವರಣದ ಸಭಾಂಗಣದಲ್ಲಿ ಪುರೋಹಿತ ತಂಬೂರಿ ಶರಣಬಸವ ವರ್ಷದ ಪಂಚಾಂಗ ಓದಿದರು. ಪಂಚಾಗದಲ್ಲಿ ಈ ವರ್ಷ ಎಲ್ಲಾ ವರ್ಗದವರಿಗೆ ಗುರುಬಲವಿದೆ, ಅಧಿಪತಿ ಮಂಗಳವಾಗುತ್ತಾನೆ. ಅಲ್ಪ ಸ್ವಲ್ಪ ಖರ್ಚು, ನಷ್ಟಕ್ಕೆ ಒಳಗಾಗುತ್ತಾರೆ. ಉತ್ತಮವಾಗಿ ಮುಂಗಾರು ಮಳೆಯಾಗಲಿದ್ದು, ಹಿಂಗಾರು ಹಿನ್ನಡೆಯಾಗಬಹುದು.

ಬೆಳೆಗಳು ಸಮೃದ್ಧವಾಗಿ ಬೆಳೆದು ರೈತರ ಮೊಗದಲ್ಲಿ ಮಂದಹಾಸ ಬೀರಲಿವೆ. ಕೆಂಪು ಧಾನ್ಯಗಳಿಗೆ ಬಲತ್ಕಾರವಿದೆ. ಕಾರುಣ್ಣುವೆಯಲ್ಲಿ ಕೆಂಪು ಎತ್ತು ಜಯಶಾಲಿಗೊಳ್ಳಲಿವೆ ಎಂದರು.

ನಂತರ ನೆರೆದಿದ್ದ ಭಕ್ತಾದಿಗಳು ತಮ್ಮ ಹೆಸರು, ಕುಟುಂಬದವರ ಹೆಸರುಗಳ ಮೇಲೆ ಪಂಚಾಂಗವನ್ನು ಕೇಳಿಕೊಂಡರು. ಶ್ರೀ ನಾಗನಾಥೇಶ್ವರ ದೇವಸ್ಥಾನದ ಧರ್ಮಕರ್ತರಾದ ಬಿ.ಮಾಹಾರುದ್ರಗೌಡ, ಅಂಬರೀಷ ಗೌಡ, ಅಡಿವೆಯ್ಯ ಸ್ವಾಮಿ, ಕೆ.ದ್ಯಾವಣ್ಣ, ನಾಗರಾಜ ಗೌಡ, ಬಿಚ್ಚುಗತ್ತಿ ಮಲ್ಲಯ್ಯ, ಬಕಾಡೆ ಈರಯ್ಯ, ಡ್ರೈವರ್ ಹುಲುಗಪ್ಪ, ಗೋಡೆ ಶೇಖರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net