More

    ಬಸವಣ್ಣನ ನಾಡಲ್ಲಿ ಪಂಚಾಂಗ ನಡೆಯಲ್ಲ ; ಪ್ರಾಧ್ಯಾಪಕ ಡಾ.ವಡ್ಡಗೆರೆ ನಾಗರಾಜಯ್ಯ ಅಭಿಪ್ರಾಯ

    ತುಮಕೂರು : ದೇಶದಲ್ಲಿ ಪಂಚಾಂಗ ಜಾರಿಯಾಗುತ್ತಿದೆಯೇ ಹೊರತು, ರಾಜ್ಯಾಂಗವಲ್ಲ. ಬುದ್ದ, ಅಂಬೇಡ್ಕರ್, ಬಸವಣ್ಣ ಹುಟ್ಟಿದ ನಾಡಿನಲ್ಲಿ ಪಂಚಾಂಗ ನಡೆಯುವುದಿಲ್ಲ ಎಂಬುದನ್ನು ಸಾರಬೇಕಿದೆ ಎಂದು ಪ್ರಾಧ್ಯಾಪಕ ಡಾ.ವಡ್ಡಗೆರೆ ನಾಗರಾಜಯ್ಯ ಅಭಿಪ್ರಾಯಪಟ್ಟರು.

    ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾ ಮಾದಿಗರ ಸ್ವಾಭಿವಾನಿ ಸವಾವೇಶ ಹಾಗೂ ಎಸ್ಸೆಸ್ಸೆಲ್ಸಿ, ಪಿಯುಸಿ, ಗ್ರಾಪಂ ಸದಸ್ಯರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಶೇ.4 ಇರುವ ಜನ ಶೇ.10 ಮೀಸಲಾತಿಯನ್ನು ಯಾವುದೇ ಹೋರಾಟವಿಲ್ಲದೆ ಪಡೆದು ಅನುಭವಿಸುತ್ತಿದ್ದಾರೆ. ಆದರೆ ಶೇ 60 ಇರುವ ದಲಿತರಿಗೆ ಶೇ.15 ಮೀಸಲಾತಿ ನೀಡಿ ಅವಕಾಶಗಳಿಂದ ವಂಚಿಸಲಾಗಿದೆ ಎಂದರು.

    ಕಶಪ ವಾತಂಗ ಮುನಿಯ ದಾರಿಯಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಅವರಂತೆ ಮಾದಿಗ ಸಮುದಾಯ ನಡೆದಾಗ ವಾತ್ರ ರಾಜಕೀಯ ಅಧಿಕಾರ ಪಡೆಯಲು ಸಾಧ್ಯ, ಅಂಬೇಡ್ಕರ್ ಅವರ ಆಶಯವು ಸಹ ಬುದ್ಧನ ಹಾದಿಯಲ್ಲಿ ದೇಶದ ರಾಜಕಾರಣ ನಡೆಯಬೇಕು ಎಂಬುದಾಗಿತ್ತು ಎಂದರು.

    ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಪರ ಕಾರ್ಯದರ್ಶಿ ಬಿ.ಎಚ್.ಅನಿಲ್‌ಕುವಾರ್ ಮಾತನಾಡಿ, ಮಾದಿಗ ಸಮುದಾಯದೊಳಗಿನ ಒಡಕು ಸರಿಪಡಿಸಿಕೊಂಡು ರಾಜ್ಯಕ್ಕೆ ತುಮಕೂರು ಜಿಲ್ಲೆ ಮಾದರಿಯಾಗಿದೆ. ಇಂದು ಸಮುದಾಯಕ್ಕೆ ಗುರು ಇದ್ದಾರೆ, ಗುರಿಯೂ ಇದೆ. ಅದನ್ನು ಕಾರ್ಯಗತಗೊಳಿಸಲು ಸಮುದಾಯದ ಎಲ್ಲರು ಸಹಕಾರ ನೀಡಬೇಕು ಎಂದರು.

    ಜಿಲ್ಲೆಯಲ್ಲಿ ಅತಿಹೆಚ್ಚು ಸಂಖ್ಯೆಯಲ್ಲಿ ಮಾದಿಗ ಸಮುದಾಯವಿದ್ದರೂ, ಅದನ್ನು ಶಕ್ತಿಯುತವಾಗಿ ಕಟ್ಟಲು ಯಾರು ಪ್ರಯತ್ನ ಮಾಡಿಲ್ಲ, ಎಪ್ಪತ್ತೈದು ವಫಿರ್ಗಳಲ್ಲಿ ಸರಕಾರ ನೀಡಿರುವ ಸೌಲಭ್ಯಗಳನ್ನು ಸಮುದಾಯ ಪಡೆದುಕೊಂಡಿಲ್ಲ.ಇಂದಿನ ಸ್ಪರ್ಧಾತ್ಮಕ ಸಮಯದಲ್ಲಿಮಾದಿಗ ಸಮುದಾಯ ಒಗ್ಗಟ್ಟಿನ ಹೋರಾಟ ವಾಡಬೇಕಿರುವುದು ಅವಶ್ಯಕ ಎಂದರು.

    ಲೇಖಕ ಪ್ರೊ.ಅರವಿಂದ ವಾಲಗತ್ತಿ ಮಾತನಾಡಿ, ಸಮುದಾಯ ಯಾವ ಕಡೆ ಇದೆ ಎನ್ನುವ ಪ್ರಶ್ನೆಯೇ ದಾರಿದೀಪವಾಗಿ, ಗುರುಗಳ ಮಾರ್ಗದರ್ಶನದಲ್ಲಿ ಸಮುದಾಯದ ಅಭಿವೃದ್ಧಿಯಾಗಲಿದೆ ಎಂದರು.

    ಮಾಜಿ ಶಾಸಕ ಗಂಗಹನುಮಯ್ಯ, ಕೆ.ಎಂ.ತಿಮ್ಮರಾಯಪ್ಪ, ಜಿಪಂ ವಾಜಿ ಅಧ್ಯಕ್ಷ ವೈ.ಎಚ್.ಹುಚ್ಚಯ್ಯ, ಜಿಪಂ ಮಾಜಿ ಸದಸ್ಯ ಕೆಂಚವಾರಯ್ಯ, ರೇಷ್ಮೆ ಇಲಾಖೆ ಡಿಡಿ ಡಾ.ವೈ.ಕೆ.ಬಾಲಕೃಷ್ಣಪ್ಪ, ಡಾ.ಮುರಳೀಧರ, ಪ್ರಾಧ್ಯಾಪಕ ಡಾ.ಓ.ನಾಗರಾಜಯ್ಯ ಇದ್ದರು.

    ‘ನಮ್ಮ ನಡೆ, ಸಮುದಾಯ ಕಡೆ’ ಎಂಬ ಧ್ಯೇಯವಾಕ್ಯದಂತೆ ನಾವು ಸಮುದಾಯದ ಕಡೆ ಇರುತ್ತೇವೆ. ಆದರೆ, ಸಮುದಾಯ ಕೂಡ ನಮ್ಮ ಬೆಂಬಲಕ್ಕಿರಬೇಕು. ಸಮುದಾಯದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಶಿಕ್ಷಣ ಪಡೆದು, ಸಂಘಟಿತರಾಗಿ ಹೋರಾಟ ನಡೆಸಬೇಕು. ತುಮಕೂರು ಜಿಲ್ಲೆಯಲ್ಲಿ ಈ ದಿಕ್ಕಿನಲ್ಲಿ ಮೊದಲ ಹೆಜ್ಜೆಯಾಗಿದೆ.
    ಶ್ರೀಮಾದಾರ ಬಸವಮೂರ್ತಿ ಸ್ವಾಮೀಜಿ ಚಿತ್ರದುರ್ಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts