ವೆಂಕಟಲಕ್ಷ್ಮೀ ಟವರ್ಸ್‌ನಲ್ಲಿ ನಾಗಮಂಡಲೋತ್ಸವ

naga-1
Published on

ಕುಂದಾಪುರ: ಶೃಂಗೇರಿ ಶ್ರೀ ಶಾರದಾ ಪೀಠಾಧೀಶ ಜಗದ್ಗುರು, ಶಂಕರಾಚಾರ್ಯ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳು ಹಾಗೂ ಶ್ರೀ ವಿಧುಶೇಖರ ಭಾರತಿ ಮಹಾಸ್ವಾಮಿಗಳ ಆಶೀರ್ವಾದಗಳೊಂದಿಗೆ ಜ.19ರಂದು ಕುಂಭಾಶಿಯಲ್ಲಿ ವೆಂಕಟಲಕ್ಷ್ಮೀ ಟವರ್ಸ್‌ ಉದ್ಘಾಟನೆಗೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ಕಜ್ಕೆ ರಾಮಕೃಷ್ಣ ಭಟ್ ನೇತೃತ್ವದಲ್ಲಿ ಹಾಲಿಟ್ಟು ಸೇವೆ ಹಾಗೂ ಚತುಃಪವಿತ್ರ ನಾಗಮಂಡಲೋತ್ಸವ ಶುಕ್ರವಾರ ಸಂಪನ್ನಗೊಂಡಿತು.

ನಾಗಪಾತ್ರಿ ಶಂಕರನಾರಾಯಣ ಬಾಯರಿ ಬೀಜಾಡಿ, ವೈದ್ಯ ಸರ್ವೋತ್ತಮ ವೈದ್ಯರು ಮತ್ತು ಬಳಗ, ವೆಂಕಟಲಕ್ಷ್ಮೀ ಬಿಲ್ಡರ್ಸ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಚಂದ್ರಶೇಖರ ಐತಾಳ್, ಹೇಮಾವತಿ ಚಂದ್ರಶೇಖರ ಐತಾಳ್, ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ ವಿಶ್ರಾಂತ ಆಡಳಿತ ಧರ್ಮದರ್ಶಿ ಕೆ.ಸೂರ್ಯನಾರಾಯಣ ಉಪಾಧ್ಯಾಯ, ಉದ್ಯಮಿ ಗೋಪಾಡಿ ಶ್ರೀನಿವಾಸ್ ರಾವ್, ಶ್ರೀಧರ ಉಪಾಧ್ಯಾಯ, ರಾಘವೇಂದ್ರ ಐತಾಳ್, ಗುರುರಾಜ್ ಐತಾಳ್, ರಾಮರಾಜ್, ಶ್ರೀಲಕ್ಷ್ಮೀ, ಅನಂತ ಪದ್ಮನಾಭ ಐತಾಳ್, ಶ್ರೀಲತಾ ಐತಾಳ್, ಅವನಿ, ಸ್ವಾಗತ ಸಮಿತಿ ಪ್ರಮುಖರಾದ ರಾಮಚಂದ್ರ ವರ್ಣ, ಪಿ.ಶ್ಯಾಮ್ ರಾವ್, ಸೀತಾರಾಮ ಧನ್ಯ ಗೋಪಾಡಿ, ಡಾ.ಎಂ.ಆರ್.ಅಡಿಗ, ದ್ರಾವಿಡ ಬ್ರಾಹ್ಮಣ ಪರಿಷತ್ ಕೋಟೇಶ್ವರ ವಲಯ ಅಧ್ಯಕ್ಷ ವಾದಿರಾಜ್ ಹೆಬ್ಬಾರ್, ಸಮಿತಿಯ ಮುಖಂಡ ಗಣೇಶ್ ಭಟ್ ಗೋಪಾಡಿ, ನಿವೃತ್ತ ಮೆಸ್ಕಾಂ ಅಧಿಕಾರಿ ಬಾಬಣ್ಣ ಪೂಜಾರಿ, ಪ್ರಭಾಕರ ಕುಂಭಾಶಿ, ರಮೇಶ್ ಪುತ್ರನ್ ವಿವಿಧ ಸಮಿತಿಗಳ ಅಧ್ಯಕ್ಷರು, ಸ್ಥಳೀಯ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಭಕ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net