

ಕೊಳ್ಳೇಗಾಲ: ಪಟ್ಟಣದಲ್ಲಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಮಾಲಾರ್ಪಣೆ ಮಾಡಿದರು.
ಸರ್ಕಾರಿ ಉಪವಿಭಾಗ ಆಸ್ಪತ್ರೆ ಭೇಟಿ ನೀಡಿ ಪರಿಶೀಲಿಸುವ ಮುನ್ನ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಮಾಲಾರ್ಪಣೆ ಮಾಡಿ ಗೌರವಿಸಿದರು. ಈ ವೇಳೆ ಯೂತ್ ಕಾಂಗ್ರೆಸ್ ಪದಾಧಿಕಾರಿಗಳು, ರೈತ ಮುಖಂಡರು, ಕಾಂಗ್ರೆಸ್ ಮುಖಂಡರು, ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಆಯೋಗದ ಅಧ್ಯಕ್ಷರನ್ನು ಸನ್ಮಾನಿಸಿದರು.
ಈ ವೇಳೆ ರೈತ ಮುಖಂಡ ದಶರಥ್ ಮಾತನಾಡಿ, ಅರಣ್ಯ ಅಂಚಿನಲ್ಲಿರುವ ಗ್ರಾಮಗಳಿಗೆ ಮೂಲ ಸೌಕರ್ಯ ವನ್ನು ಒದಗಿಸಬೇಕು. ಹೊರಗನಿಂದ ಆಗಮಿಸಿದ ಒಡೆಯರಪಾಳ್ಯ ದಲ್ಲಿರುವ ಟಿಬೇಟಿನ್ನಿಯರಿಗೆ ರಸ್ತೆ, ನೀರು ಸಕಲ ಸೌಕರ್ಯ ನೀಡಲಾಗಿದೆ. ಆದರೆ, ಇಲ್ಲಿ ಹುಟ್ಟಿದವರಿಗೆ ಇನ್ನೂ ಮೂಲ ಸೌಕರ್ಯ ಸಮರ್ಪಕವಾಗಿ ದೊರೆತಿಲ್ಲ ಎಂದು ದೂರು ನೀಡಿದರು. ಈ ಬಗ್ಗೆ ಕ್ರಮವಹಿಸುವುದಾಗಿ ಆಯೋಗದ ಅಧ್ಯಕ್ಷರು ತಿಳಿಸಿದರು. ರೈತ ಮುಖಂಡ ರಾಮಕೃಷ್ಣ ಎಂಬುವರು ಎಸ್‌ವಿಕೆ ಬಾಲಕಿಯರ ಕಾಲೇಜಿನಲ್ಲಿ ನೂರಾರು ಸಂಖ್ಯೆಯಲ್ಲಿ ಬಡ ಹೆಣ್ಣು ಮಕ್ಕಳು ಓದುತ್ತಿದ್ದು. ಈ ಕಾಲೇಜಿನಲ್ಲಿಯೇ ಮಹಿಳಾ ಪದವಿ ಕಾಲೇಜು ಆರಂಭಿಸಬೇಕು ಎಂದು ಮನವಿ ಮಾಡಿಕೊಂಡರು. ಕರವೇ ಪದಾಧಿಕಾರಿಗಳು ರಕ್ತ ನಿಧಿ ಕೇಂದ್ರ ತೆರೆತಲು ಮನವಿ ಮಾಡಿಕೊಂಡರು. ಇನ್ನು ನೆರೆದಿದ್ದ ಮಹಿಳೆಯರು ಇತರೆ ಸಂಘಟನೆಗಳ ಮುಖಂಡರು ಅಹವಾಲು ಸಲ್ಲಿಸಿದರು.