

ನರೇಗಲ್ಲ: ನರೇಗಲ್ಲ ಹೋಬಳಿಯಾದ್ಯಂತ ಭಾನುವಾರ ಸಂಭ್ರಮದಿಂದ ನಾಗ ಪಂಚಮಿ ಆಚರಿಸಲಾಯಿತು.
ಪಟ್ಟಣ, ಕೋಡಿಕೊಪ್ಪ, ಕೊಚಲಾಪೂರ, ತೋಟಗಂಟಿ, ಮಲ್ಲಾಪುರ, ದ್ಯಾಂಪೂರ, ಜಕ್ಕಲಿ, ಬೂದಿಹಾಳ, ಮಾರನಬಸರಿ, ಹಾಲಕೆರೆ, ನಿಡಗುಂದಿ, ನಿಡಗುಂದಿಕೊಪ್ಪ, ಯರೇಬೇಲೇರಿ, ಕುರಡಗಿ, ಗುಜಮಾಗಡಿ, ಡ.ಸ. ಹಡಗಲಿ ಸೇರಿ ಸುತ್ತಲಿನ ಗ್ರಾಮಗಳಲ್ಲಿ ಶ್ರದ್ಧಾ-ಭಕ್ತಿಯಿಂದ ನಾಗರ ಪಂಚಮಿ ಆಚರಿಸಲಾಯಿತು.
ಸ್ಥಳೀಯ ನಾಗರಕೆರೆಯ ದಂಡೆಯ ನಾಗದೇವಸ್ಥಾನ, ಪೊಲೀಸ್ ಠಾಣೆ ಆವರಣ, ಭೂತನಾಥ ದೇವಾಲಯ, ಕೆಇಬಿ, ಗ್ರಾಮದೇವತೆ ದೇವಸ್ಥಾನ ಹಾಗೂ ಇತರೆಡೆಗಳಲ್ಲಿ ನಾಗದೇವರಿಗೆ ಹಾಲೆರೆದರು.
ಪಂಚಮಿ ಹಬ್ಬವೆಂದರೆ ಮಹಿಳೆಯರಿಗೆ ಎಲ್ಲಿಲ್ಲದ ಸಡಗರ ಸಂಭ್ರಮ. ಮಕ್ಕಳಿಗೂ ಅಷ್ಟೇ ಮನೆಯಲ್ಲಿ ತಯಾರಿಸಿದ ವಿವಿಧ ಬಗೆಯ ತಿಂಡಿ, ತಿನಿಸು ತಿಂದು ಜೋಕಾಲಿ ಆಡುವ ಮೂಲಕ ಮಕ್ಕಳು, ಮಹಿಳೆಯರು ಸಂಭ್ರಮಿಸುತ್ತಿರುವುದು ಕಂಡು ಬಂದಿತು.