ವಿದ್ಯಾರ್ಥಿನಿಯರಿಂದ ನಾಗಪಂಚಮಿ ಆಚರಣೆ

Untitled design (11)
ಹನುಮಸಾಗರದ ಕಸ್ತೂರಿಬಾ ಗಾಂಧಿ ವಸತಿ ಶಾಲೆಯ ವಿದ್ಯಾರ್ಥಿಗಳು ಆವರಣದಲ್ಲಿನ ನಾಗಪ್ಪನ ಮೂರ್ತಿಗೆ ಹಾಲು ಹಾಕಿದರು. ಮುಖ್ಯ ಶಿಕ್ಷಕಿ ಭಾರತಿ ದೇಸಾಯಿ, ಸಿಬ್ಬಂದಿ ಇದ್ದರು.
Published on

ಹನುಮಸಾಗರ: ಪಟ್ಟಣ ಸೇರಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಾಗಪಂಚಮಿ ನಿಮಿತ್ತ ಮಹಿಳೆಯರು ದೇವಸ್ಥಾನಗಳಲ್ಲಿ ಸ್ಥಾಪಿಸಿರುವ ನಾಗಪ್ಪನ ಮೂರ್ತಿಗಳಿಗೆ ಹಾಲೆರೆದರು.

ನಾಗದೇವರಿಗೆ ಹಾಲಿನ ಅಭಿಷೇಕ

ಪಟ್ಟಣದ ಅಂಬಾಭವಾನಿ ದೇವಸ್ಥಾನದ, ಕರಿಸಿದ್ದೇಶ್ವರ ಮಠ, ರಾಘವೇಂದ್ರಮಠ, ಆಶ್ರಯ ಕಾಲನಿಯ ಆಂಜನೇಯ ದೇವಸ್ಥಾನ ಸೇರಿ ವಿವಿಧ ದೇವಸ್ಥಾನಗಳಲ್ಲಿ ಸ್ಥಾಪಿಸಿರುವ ನಾಗದೇವರಿಗೆ ಹಾಲಿನ ಅಭಿಷೇಕ ಮಾಡಲಾಯಿತು.

ಮಹಿಳೆಯರು ವಿವಿಧ ಬಗೆಯ ಸಿಹಿ ಉಂಡಿಗಳನ್ನು ಸಿದ್ಧಪಡಿಸಿ ದೇವರಿಗೆ ಸಮರ್ಪಿಸಿದರು. ಗ್ರಾಮಗಳಿಗೆ ತೆರಳದೆ ಕಸ್ತೂರಬಾ ಗಾಂಧಿ ವಸತಿ ನಿಲಯದ ವಿದ್ಯಾರ್ಥಿನಿಯರು ನಾಗರ ಪಂಚಮಿ ಆಚರಿಸಿದರು. ವಸತಿ ನಿಲಯದಲ್ಲಿ ವಿವಿಧ ಸಿಹಿ ಖಾದ್ಯಗಳನ್ನು ತಯಾರಿಸಿ ಸವಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net