ಪೌಷ್ಟಿಕ ಆಹಾರವಾದ ಹಾಲು ವ್ಯರ್ಥವಾಗದಿರಲಿ

20Jaggu4
ಬೆಳಗಾವಿಯಲ್ಲಿ ಮಾನವ ಬಂಧುತ್ವ ವೇದಿಕೆಯ ಆಶ್ರಯದಲ್ಲಿ ಅಂಗವಿಕಲ ಕ್ರೀಡಾಪಟುಗಳಿಗೆ ಬಸವ ಪಂಚಮಿ ಪ್ರಯುಕ್ತ ಹಾಲು ವಿತರಣೆ ಮಾಡಲಾಯಿತು. ಡಾ.ಯಲ್ಲಪ್ಪ ಹಿಮ್ಮಡಿ, ಪ್ರಕಾಶ ಬೊಮ್ಮಣ್ಣವರ, ಚಿಂತಕ ಶಂಕರ ಬಾಗೇವಾಡಿ ಇತರರಿದ್ದರು.
Published on

ಬೆಳಗಾವಿ: ಪೌಷ್ಟಿಕ ಆಹಾರವಾದ ಹಾಲನ್ನು ನಾಗರಪಂಚಮಿ ಹೆಸರಿನಲ್ಲಿ ಹುತ್ತಕ್ಕೆ ಮತ್ತು ಕಲ್ಲು ನಾಗರಮೂರ್ತಿಗೆ ಹಾಕುವ ಬದಲು ಪೌಷ್ಟಿಕ ಆಹಾರದ ಕೊರತೆಯಿಂದ ಬಳಲುವ ಬಲಹೀನರಿಗೆ ನೀಡಿ ಮನುಷ್ಯರಾಗಬೇಕು ಎಂದು ಬಂಡಾಯ ಸಾಹಿತಿ ಡಾ. ಯಲ್ಲಪ್ಪ ಹಿಮ್ಮಡಿ ಹೇಳಿದರು.

ಮಾನವ ಬಂಧುತ್ವ ವೇದಿಕೆ ಆಶ್ರಯದಲ್ಲಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಅಂಗವಿಕಲ ಕ್ರೀಡಾಪಟುಗಳಿಗೆ ಬಸವ ಪಂಚಮಿ ಪ್ರಯುಕ್ತ ಭಾನುವಾರ ಏರ್ಪಡಿಸಿದ್ದ ಹಾಲು ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಆಚರಣೆ ಹೆಸರಿನಲ್ಲಿ ಅಪವ್ಯಯ ನಿಲ್ಲಬೇಕು. ಬಸವ ಪಂಚಮಿ ಪ್ರಚಲಿತವಾಗಬೇಕು ಎಂದರು. ಚಿಂತಕ ಶಂಕರ ಬಾಗೇವಾಡಿ ಮಾತನಾಡಿ, ಬಸವಣ್ಣನವರು ಲಿಂಗೈಕ್ಯರಾದ ದಿನದಂದು ನಡೆಯುವ ಪಂಚಮಿಯನ್ನು ವೈಚಾರಿಕ ನೆಲೆಯಲ್ಲಿ ಬಸವ ಪಂಚಮಿಯನ್ನಾಗಿ ಆಚರಿಸಲಾಗುತ್ತಿದ್ದು, ನಾವೆಲ್ಲರೂ ಮೌಢ್ಯದಿಂದ ಮುಕ್ತರಾಗಬೇಕಿದೆ ಎಂದರು. ಮುಖಂಡ ಪ್ರಕಾಶ ಬೊಮ್ಮಣ್ಣವರ, ವಿದ್ಯಾರ್ಥಿ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕ ಆಕಾಶ ಬೇವಿನಕಟ್ಟಿ ನೇತೃತ್ವ ವಹಿಸಿದ್ದರು. ಜಿಲ್ಲಾ ಅಂಗವಿಕಲರ ಕ್ರೀಡಾ ಸಂಘದ ಅಧ್ಯಕ್ಷ ಮಹಾಂತೇಶ ಹೊಂಗಲ, ಕ್ರೀಡಾಪಟುಗಳಾದ ಮಾಯಾ ಸಣ್ಣಲಿಂಗನ್ನವರ, ಆರತಿ ಪವಾರ, ರಿಜ್ವಾನ್ ಜಮಾದಾರ, ಪಕೀರಪ್ಪ ಕರವಿನಕೊಪ್ಪ, ಪ್ರೊ.ದೇವಣ್ಣ ಸೊಗಲದ, ಆಸಿಫ್ ಎಲಿಗಾರ, ಬಸವರಾಜ ಬಾಗಡಿ, ಪ್ರಶಾಂತ ಮೋದಗಿ, ಬಸಪ್ಪ ಕೋಲ್ಕಾರ, ಅಂಕುಶ ಪಾಟೀಲ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net