

ಹಟ್ಟಿಚಿನ್ನದಗಣಿ: ಮುಂಗಾರು ಬಿತ್ತನೆ ನಂತರ ಶ್ರಾವಣ ಮಾಸದ ಮೊದಲ ಹಬ್ಬದ ಸಂಭ್ರಮ, ಸಡಗರದಿಂದ ಆಚರಿಸುವ ಹಬ್ಬವೆಂದರೆ ನಾಗರ ಪಂಚಮಿ.
ಇದನ್ನೂ ಓದಿ: ಜಿಲ್ಲಾದ್ಯಂತ ಶ್ರಾವಣ ಸಂಭ್ರಮ
ಪಟ್ಟಣದ ಮಹಿಳೆಯರು ಮಕ್ಕಳು ಹೊಸ ಬಟ್ಟೆಗಳನ್ನು ಧರಿಸಿ, ಮನೆಯಲ್ಲಿ ಮಾಡಿದ ಸಿಹಿ ತಿಂಡಿಗಳನ್ನು ಮಾರುತಿ ದೇವಸ್ಥಾನದ ಹತ್ತಿರ ಇರುವ ನಾಗ ದೇವರ ಮೂರ್ತಿಗಳಿಗೆ ಹಾಲು, ಸಕ್ಕರೆಗಳಿಂದ ಅಭಿಷೇಕ ಮಾಡಿ ಅರಿಷಿಣ, ಹೂಗಳಿಂದ ಅಲಂಕರಿಸಿ ಪೂಜಿಸಿದರು.
ನಾಗ ದೇವರ ಆಶೀರ್ವಾದ ಪಡೆದರೆ ಜಾತಕದಲ್ಲಿನ ಸರ್ಪದೋಷಗಳೂ ನಿವಾರಣೆಯಾಗುತ್ತವೆ ಎನ್ನುವುದು ಜನರ ನಂಬಿಕೆಯಾಗಿದೆ. ರೈತರು ತಮ್ಮ ಜಮೀನಿನಲ್ಲಿರುವ ಹುತ್ತಗಳಿಗೆ ತನು, ಕ್ಷೀರಾಭಿಷೇಕ ಮಾಡಿದರೆ ನಾಗದೇವರು ಅನುಗ್ರಹಿಸುತ್ತಾನೆ ಎಂಬ ನಂಬಿಕೆಯಿಂದ ನಾಗ ಪಂಚಮಿ ದಿನದಂದು ಇಂದಿಗೂ ರೈತರು ಕುಟುಂಬ ಸಮೇತ ಜಮೀನಿಗೆ ತೆರಳಿ ಹುತ್ತಗಳನ್ನು ಪೂಜಿಸುತ್ತಾರೆ.