

ಬೆಳ್ತಂಗಡಿ: ವಸ್ತುನಿಷ್ಠ ವರದಿಯೊಂದಿಗೆ ಅತ್ಯುತ್ತಮ ಲೇಖನಗಳನ್ನು ನಿತ್ಯ ಓದುಗರಿಗೆ ಒದಗಿಸುವ ಜತೆಗೆ ಒದುಗರಿಗೆ ವಿವಿಧ ಕೊಡುಗೆ ನೀಡಿ ವಿಜಯವಾಣಿ ಓದುಗರನ್ನು ಬೆಳೆಸುತ್ತಿದೆ ಎಂದು ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಮುಖ್ಯನಿರ್ವಹಣಾಧಿಕಾರಿ ಪ್ರಸನ್ನ ಹೇಳಿದರು.
ಶುಕ್ರವಾರ ಉಜಿರೆ ಸಿರಿ ಸಂಸ್ಥೆಯಲ್ಲಿ, ವಿಜಯವಾಣಿ ಪತ್ರಿಕೆಯ ‘ನಾರಿ ನಿನಗೊಂದು ಸ್ಯಾರಿ’ ಬಹುಮಾನ ಯೋಜನೆಯ ಲಕ್ಕಿ ಡ್ರಾ ನೆರವೇರಿಸಿ ಮಾತನಾಡಿದರು.
ವಿಜಯವಾಣಿ ವಿಜಯೋತ್ಸವ, ಪತ್ರಿಕೆ ಓದಿ ಬಹುಮಾನ ಗೆಲ್ಲಿ, ಪ್ರಶ್ನೆಗೆ ಉತ್ತರಿಸಿ ಸೀರೆ ಗೆಲ್ಲಿ ಮುಂತಾದ ಅವಕಾಶಗಳನ್ನು ಓದುಗರಿಗೆ ನೀಡಿ ಅನೇಕ ಬಹುಮಾನ ಗೆಲ್ಲುವ ಅವಕಾಶ ಒದಗಿಸುತ್ತಿದೆ. ಮಹಿಳೆಯರು ನಿತ್ಯ ಪತ್ರಿಕೆ ಓದುವ ಹವ್ಯಾಸ ಬೆಳೆಸಬೇಕು. ಆಗ ಮಕ್ಕಳು ಕೂಡ ಪತ್ರಿಕೆ ಓದುವ ಹವ್ಯಾಸ ಬೆಳೆಸುತ್ತಾರೆ ಎಂದರು.
ಇದೇ ಸಂದರ್ಭ 25 ಅದೃಷ್ಟಶಾಲಿಗಳನ್ನು ಅಯ್ಕೆಮಾಡಲಾಯಿತು. ಸಿರಿ ಸಿದ್ಧ ಉಡುಪು ವಿಭಾಗದ ಜನರಲ್ ಮ್ಯಾನೇಜರ್ ಅರುಣ್ ಕೋಟ್ಯಾನ್ ಮತ್ತು ವಿವಿಧ ವಿಭಾಗಗಳ ಮೇಲಧಿಕಾರಿಗಳು, ಮೇಲ್ವಿಚಾರಕರು, ಸಿರಿ ಸಿಬ್ಬಂದಿ, ವಿಜಯವಾಣಿ ಪತ್ರಿಕೆಯ ಬೆಳ್ತಂಗಡಿ ವರದಿಗಾರ ಮನೋಹರ್ ಬಳಂಜ, ವಿಜಯವಾಣಿ ಪ್ರಸರಣ ವಿಭಾಗದ ಗಿರೀಶ್ ಉಪಸ್ಥಿತರಿದ್ದರು.