

ಉಳ್ಳಾಲ: ಶೇಕಡಾ 24.10ರ ಯೋಜನೆಯಡಿ ಸೋಮೇಶ್ವರ ಪುರಸಭಾ ವ್ಯಾಪ್ತಿಯಲ್ಲಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ನಿವೇಶನ ಖರೀದಿ, ಮನೆ ನಿರ್ಮಾಣ, ಮನೆ ದುರಸ್ತಿ, ಸ್ವಉದ್ಯೋಗಕ್ಕೆ ಸಹಾಯಧನ, ಎಂಬಿಬಿಎಸ್, ಬಿಇ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಖರೀದಿಗೆ ಸಹಾಯಧನ, ವಿವಿಧ ಹಂತಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ, ವೈದ್ಯಕೀಯ ವೆಚ್ಚ, ಶಸಚಿಕಿತ್ಸೆ, ಕೃತಕ ಅಂಗ ಜೋಡಣೆಗೆ ಸಹಾಯಧನ ನೀಡಲು ಅರ್ಹ ಫಲಾನುಭವಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಏ.15 ಕೊನೆಯ ದಿನ. ಅರ್ಹ ಫಲಾನುಭವಿಗಳು ಸೋಮೇಶ್ವರ ಪುರಸಭಾ ಕಚೇರಿಯನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳುವಂತೆ ಪ್ರಕಟಣೆ ತಿಳಿಸಿದೆ.