ಸರ್ಕಾರಿ ಜಮೀನು ಸ್ವಾಧೀನಕ್ಕೆ ಆಗ್ರಹ

ದಲಿತ ಸಂಘರ್ಷ ಸಮಿತಿ(ಭೀಮವಾದ)ಯ ಪ್ರತಿಭಟನೆ
ಸರ್ಕಾರಿ ಜಮೀನು ಸ್ವಾಧೀನಕ್ಕೆ ಪಡೆಯದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಭೀಮವಾದ)ಯ ಕಾರ್ಯಕರ್ತರು ಪಟ್ಟಣದ ತಾಲೂಕು ಕಚೇರಿ ಮುಂಭಾಗ ಬುಧವಾರ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದರು.  ಛಲವಾದಿ ಎಸ್.ಚಂದ್ರಶೇಖರ್, ಕೆಂಪಯ್ಯನಹುಂಡಿ ಆರ್.ರಾಜು, ಕನ್ನನಾಯಕನಹಳ್ಳಿ ಮರಿಸ್ವಾಮಿ, ನೆರೆಗ್ಯಾತನಹಳ್ಳಿ ಮನೋಜ್ ಕುಮಾರ್, ತೊಟ್ಟವಾಡಿ ರಾಜಪ್ಪ ಇತರರು ಇದ್ದರು.

Published on: 

ತಿ.ನರಸೀಪುರ : ಅತಿಕ್ರಮಗೊಂಡಿರುವ ಸರ್ಕಾರಿ ಜಮೀನು ಸ್ವಾಧೀನಕ್ಕೆ ಪಡೆಯದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಭೀಮವಾದ)ಯ ಕಾರ್ಯಕರ್ತರು ಪಟ್ಟಣದ ತಾಲೂಕು ಕಚೇರಿ ಮುಂಭಾಗ ಬುಧವಾರ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದರು.

ರಾಜ್ಯ ವಿಭಾಗೀಯ ಸಂಚಾಲಕ ಛಲವಾದಿ ಡಾ.ಎಸ್.ಚಂದ್ರಶೇಖರ್ ಮಾತನಾಡಿ, ತಿರುಮಕೂಡಲು ನದಿ ಪ್ರವಾಹ ಮುಳುಗಡೆ ಪ್ರದೇಶದಲ್ಲಿದ್ದ 9 ಆದಿವಾಸಿ ಕುಟುಂಬಗಳ ರಕ್ಷಣೆಗಾಗಿ ವರುಣ ವಿಧಾನಸಭಾ ಕ್ಷೇತ್ರದ ಕಸಬಾ ಹೋಬಳಿ ಹಾಲ್ಗೋಡು ವ್ಯಾಪ್ತಿಯ ಹಳೇ ಸಂತೆಮಾಳದಲ್ಲಿರುವ ಸರ್ಕಾರಿ ಜಮೀನನ್ನು ಈ ಹಿಂದೆ ಗುರುತಿಸಲಾಗಿತ್ತು. ಹಿಂದಿನ ತಹಸೀಲ್ದಾರ್ ಆದೇಶದಂತೆ ಆಶ್ರಯ ಯೋಜನೆಯಡಿ ನಿವೇಶನ ಹಂಚಲು ತಾಲೂಕು ಪಂಚಾಯಿತಿ ಇಒ ಅವರಿಗೆ ಜಮೀನು ಹಸ್ತಾಂತರಿಸಿ, 1997ರಲ್ಲಿ ಆದಿವಾಸಿ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಲಾಗಿತ್ತು.

ಆದರೆ, ಇದರಲ್ಲಿ ಉಳಿಕೆಯಾಗಿದ್ದ 4 ಗುಂಟೆ ಸರ್ಕಾರಿ ತೋಪು ಜಮೀನನ್ನು ಖಾಸಗಿ ವ್ಯಕ್ತಿ ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ. ಈ ಕುರಿತು ಸುತ್ತಮುತ್ತಲಿನ ರೈತರು, ಸಂಬಂಧಪಟ್ಟವರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕ ಕೆಂಪಯ್ಯನಹುಂಡಿ ಆರ್.ರಾಜು, ಮುಖಂಡರಾದ ಕನ್ನನಾಯಕನಹಳ್ಳಿ ಮರಿಸ್ವಾಮಿ, ನೆರೆಗ್ಯಾತನಹಳ್ಳಿ ಮನೋಜ್ ಕುಮಾರ್, ತೊಟ್ಟವಾಡಿ ರಾಜಪ್ಪ, ಬೈರಾಪುರ ಅರ್ಜುನ್, ಕುಪ್ಯಾ ಗವಿಸಿದ್ದಯ್ಯ, ಹೆಮ್ಮಿಗೆ ಪ್ರಸನ್ನ, ಪ್ರೇಮ್‌ಕುಮಾರ್, ಮಹದೇವಸ್ವಾಮಿ, ಚೌಹಳ್ಳಿ ಪರಶುರಾಮ, ಆರ್.ಸಿದ್ದಯ್ಯ, ಮಹದೇವ, ಪುಟ್ಟಮಾದೇಗೌಡ ಇತರರು ಇದ್ದರು.