ಜಾನುವಾರು ಅಲಂಕರಿಸಿ ಸಂತಸಪಟ್ಟ ರೈತರು

ಎತ್ತಿನಗಾಡಿ ಓಟ, ರಾಸುಗಳ ಮೆರವಣಿಗೆ
ಎಚ್.ಡಿ.ಕೋಟೆ ತಾಲೂಕಿನ ಬೆಳಗನಹಳ್ಳಿ ಗ್ರಾಮದಲ್ಲಿ ದೀಪಾವಳಿ ಅಂಗವಾಗಿ ರೈತರು ಎತ್ತಿನಗಾಡಿ ಹಾಗೂ ರಾಸುಗಳನ್ನು ಮೆರವಣಿಗೆ ಮಾಡಿದರು.
ಎಚ್.ಡಿ.ಕೋಟೆ ತಾಲೂಕಿನ ಬೆಳಗನಹಳ್ಳಿ ಗ್ರಾಮದಲ್ಲಿ ದೀಪಾವಳಿ ಅಂಗವಾಗಿ ರೈತರು ಎತ್ತಿನಗಾಡಿ ಹಾಗೂ ರಾಸುಗಳನ್ನು ಮೆರವಣಿಗೆ ಮಾಡಿದರು.
Published on: 

ಎಚ್.ಡಿಕೋಟೆ: ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಬೆಳಕಿನ ಹಬ್ಬ ದೀಪಾವಳಿಯನ್ನು ಜನರು ಸಾಂಪ್ರದಾಯಿಕ ಹಾಗೂ ಸಂಭ್ರಮದಿಂದ ಆಚರಿಸಿದರು.

ಪ್ರತಿವರ್ಷದಂತೆ ಈ ಬಾರಿಯೂ ಪಟ್ಟಣದಲ್ಲಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದು, ಮನೆಮನೆಗಳಲ್ಲೂ ಹಬ್ಬ ಸಡಗರ ಮನೆಮಾಡಿತ್ತು. ಹಬ್ಬದ ಅಂಗವಾಗಿ ರೈತರು ತಮ್ಮ ದನಕರುಗಳಿಗೆ ಸ್ನಾನ ಮಾಡಿಸಿ ವಿವಿಧ ಹೂಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಜಾನುವಾರುಗಳನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದರು.

ಎತ್ತಿನಗಾಡಿ ಓಟದ ಸಂಭ್ರಮ :

ಪ್ರಮುಖ ಆಕರ್ಷಣೆಯಾಗಿ ಎತ್ತಿನಗಾಡಿ ಓಟ ಹಾಗೂ ದನಗಳ ಓಟ ಆಯೋಜಿಸಲಾಗಿತ್ತು. ಸಿಂಗರಿಸಿದ ಎತ್ತುಗಳ ಓಟವನ್ನು ವೀಕ್ಷಿಸಲು ಸುತ್ತಮುತ್ತಲಿನ ಗ್ರಾಮಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಟ್ಟಣಕ್ಕೆ ಆಗಮಿಸಿದ್ದರು. ಕೆಲ ರಾಸುಗಳು ಎತ್ತಿನ ಗಾಡಿ ಜತೆಗೆ ಟ್ರಾಕ್ಟರ್ ಅನ್ನು ಎಳುಯುವ ಮೂಲಕ ಗಮನ ಸೆಳೆದವು.

ಗ್ರಾಮೀಣ ಭಾಗದಲ್ಲಿ ರಾತ್ರಿ ವೇಳೆ ರೈತರು ತಮ್ಮ ರಾಸುಗಳಿಗೆ ಕಿಚ್ಚು ಹಾಯಿಸಿದರು.

ಎತ್ತುಗಳ ಓಟದ ಸಮಯದಲ್ಲಿ ಬೆಳಗನಹಳ್ಳಿ ಗ್ರಾಮದಲ್ಲಿ ಎತ್ತು ಕಾಲು ಜಾರಿ ಬಿದ್ದ ಪರಿಣಾಮ ಎತ್ತು ಓಡಿಸುತ್ತಿದ್ದ ವ್ಯಕ್ತಿ ಬಿದ್ದು ಗಾಯಗೊಂಡರು. ಗಾಯಾಳುವಿಗೆ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಚೇತರಿಸಿಕೊಳ್ಳುತ್ತಿದ್ದಾರೆ.