ಕಾಲೇಜು ಸಭಾಂಗಣ ನಿರ್ಮಾಣಕ್ಕೆ ತೀರ್ಮಾನ

ಶಾಸಕ ಡಿ.ರವಿಶಂಕರ್ ಹೇಳಿಕೆ
ಕೆ.ಆರ್.ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಸಮಿತಿ ಮತ್ತು ವಿವಿಧ ಸಮಿತಿಗಳ ಉದ್ಘಾಟನೆ ಸಮಾರಂಭವನ್ನು ಶಾಸಕ ಡಿ.ರವಿಶಂಕರ್ ಉದ್ಘಾಟಿಸಿದರು.  ವೈ.ಎಸ್.ಜಯಂತ್,  ಡಾ.ಎಂ.ಕೆ.ಜ್ಯೋತಿ, ಕೆ.ಚಂದ್ರು, ತೋಟೇಗೌಡ, ಸಂಪತ್ತೇಗೌಡ, ಸುಧಾಕರ್, ಹೇಮಂತ್‌ಕುಮಾರ್ ಇತರರು ಇದ್ದರು.
ಕೆ.ಆರ್.ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಸಮಿತಿ ಮತ್ತು ವಿವಿಧ ಸಮಿತಿಗಳ ಉದ್ಘಾಟನೆ ಸಮಾರಂಭವನ್ನು ಶಾಸಕ ಡಿ.ರವಿಶಂಕರ್ ಉದ್ಘಾಟಿಸಿದರು. ವೈ.ಎಸ್.ಜಯಂತ್, ಡಾ.ಎಂ.ಕೆ.ಜ್ಯೋತಿ, ಕೆ.ಚಂದ್ರು, ತೋಟೇಗೌಡ, ಸಂಪತ್ತೇಗೌಡ, ಸುಧಾಕರ್, ಹೇಮಂತ್‌ಕುಮಾರ್ ಇತರರು ಇದ್ದರು.Decision for construction of college hall
Published on: 

ಕೆ.ಆರ್.ನಗರ: ಕಾಲೇಜುಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಗೆ ಸಭಾಂಗಣ ನಿರ್ಮಾಣಕ್ಕೆ ತೀರ್ಮಾನಿಸಿದ್ದು ಶೀಘ್ರದಲ್ಲೇ ಅಗತ್ಯ ಅನುದಾನ ಮಂಜೂರು ಮಾಡಿಸಲಾಗುವುದು ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.

ಪಟ್ಟಣದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಸಾಂಸ್ಕೃತಿಕ ಸಮಿತಿ ಮತ್ತು ವಿವಿಧ ಸಮಿತಿಗಳ ಉದ್ಘಾಟನೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಸಭಾಂಗಣ ನಿರ್ಮಾಣದಿಂದ ಈ ಕಾಲೇಜು ಸೇರಿದಂತೆ ನಾಲ್ಕು ಕಾಲೇಜುಗಳಿಗೆ ಅನುಕೂಲವಾಗಲಿದೆ ಎಂದರು.

ಮಹಿಳಾ ಕಾಲೇಜು ಕಟ್ಟಡ ಸುತ್ತ ಕಾಂಪೌಂಡ್ ನಿರ್ಮಾಣ ಮಾಡಲು ಶಾಸಕರ ನಿಧಿಯಿಂದ ಅನುದಾನ ನೀಲಾಗುವುದು. ಇದರ ಜತೆಗೆ ಸಿಪಿಜಡ್ ತರಗತಿಯ ಲ್ಯಾಬ್ ಕೊಠಡಿ ನಿರ್ಮಾಣಕ್ಕೂ ಅನುದಾನ ನೀಡಲಾಗುವುದು. ಮಹಿಳಾ ಪ್ರಥಮ ದರ್ಜೆ ಕಾಲೇಜಿನ ವಿವಿಧ ಅಭಿವೃದ್ಧಿಗಾಗಿ 1 ಕೋಟಿ ರೂ. ನೀಡುವಂತೆ ಸರ್ಕಾರಕ್ಕೆ ಅಂದಾಜು ಪಟ್ಟಿಯ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅನುದಾನ ಮಂಜೂರಾತಿಯ ಹಂತದಲ್ಲಿದ್ದು ಆನಂತರ ವಿದ್ಯಾರ್ಥಿನಿಯರ ಆಶಯಕ್ಕೆ ತಕ್ಕಂತೆ ಕಾಲೇಜನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಮಾಹಿತಿ ನೀಡಿದರು.

ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಕಾರ್ಯದರ್ಶಿ ವೈ.ಎಸ್.ಜಯಂತ್ ಮಾತನಾಡಿ, ಕೆ.ಆರ್.ನಗರ ಮತ ಕ್ಷೇತ್ರದ ಇಬ್ಬರು ಮಹಿಳೆಯರು ದೇಶವೇ ಮೆಚ್ಚುವಂತಹ ಸಾಧನೆ ಮಾಡಿದ್ದಾರೆ. ಕಳೆದ ವರ್ಷ ಅಂಕನಹಳ್ಳಿ ಗ್ರಾಮದ ಪ್ರೀತಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಗೊಂಡು ಜಿಲ್ಲಾಧಿಕಾರಿಯಾಗಿದ್ದಾರೆ, ಕಂಚುಗಾರ ಕೊಪ್ಪಲು ಗ್ರಾಮದ ಕೆ.ಎಸ್.ಶಿಲ್ಪಾ ಕಾಮನ್‌ವೆಲ್ತ್ ಗೇಮ್‌ನಲ್ಲಿ ಕಂಚಿನ ಪದಕ ಪಡೆದಿದ್ದಾರೆ. ಇವರನ್ನು ವಿದ್ಯಾರ್ಥಿಗಳು ಸ್ಫೂರ್ತಿಯಾಗಿ ತೆಗೆದುಕೊಂಡು ಉತ್ತಮ ಸಾಧನೆ ಮಾಡಬೇಕೆಂದು ಕಿವಿಮಾತು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net