ಮೈಸೂರು ವಿಶ್ವವಿದ್ಯಾಲಯದ ಕ್ರಾಫರ್ಡ್ ಭವನದ ಶಿಕ್ಷಣ ಮಂಡಳಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಶಿಕ್ಷಣ ಮಂಡಳಿ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, 2017ರಲ್ಲಿ 1.06 ಕೋಟಿ ರೂ. ಅನುದಾನ ಯುಜಿಸಿಯಿಂದ ಕಾಲೇಜಿಗೆ ಬಿಡುಗಡೆಯಾಯಿತು. ಆದರೆ, ಈ ಅನುದಾನಕ್ಕೆ ಸಂಬಂಧಿಸಿದಂತೆ ಕಾಲೇಜು ಇದುವರೆಗೆ ಯುಜಿಸಿಗೆ ಬಳಕೆ ಪ್ರಮಾಣಪತ್ರ ನೀಡಿಲ್ಲ. ಬಳಕೆ ಪ್ರಮಾಣಪತ್ರ ನೀಡದೆ ಹೋದರೆ ಯುಜಿಸಿ ಕಾಲೇಜನ್ನು ಮಾನ್ಯ ಮಾಡುವುದಿಲ್ಲ. ಲೆಕ್ಕಪತ್ರ ಕೇಳಿದರೆ ಕಾಲೇಜು ಆಡಳಿತ ಮಂಡಳಿ ಜೆರಾಕ್ಸ್ ಓಚರ್‌ಗಳನ್ನು ಮಾತ್ರ ನೀಡುತ್ತಿದೆ. 2020ರಿಂದ ಲೆಕ್ಕಪತ್ರವನ್ನೇ ಮಂಡಿಸಿಲ್ಲ. ಕಾಲೇಜಿನವರು ಮನ್ಸಸು ಮಾಡಿ ಲೆಕ್ಕಪತ್ರದ ಗೊಂದಲ ಪರಿಹರಿಸಿದರೆ ಸ್ವಾಯತ್ತತೆ ನೀಡಬಹುದು. ಆದರೆ, ಈ ವಸ್ತುಸ್ಥಿತಿ ಕುರಿತು ಯಾರೂ ಸಹ ಮಾತನಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.