ತಿ.ನರಸೀಪುರದಲ್ಲಿ ಚಪ್ಪಲಿ ಧರಿಸಿ ಗಣೇಶ ಮೂರ್ತಿ ಹಿಡಿದ ವಿಚಾರಕ್ಕೆ ಸಮಜಾಯಿಷಿ ನೀಡಿದ ಅವರು, ಹಿಂದೂ ಧರ್ಮದಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಿದ ಬಳಿಕ ಅದಕ್ಕೆ ಗೌರವ ನೀಡುವ ಸಂಪ್ರದಾಯವಿದೆ. ಆದರೆ ಪ್ರತಿಭಟನೆ ವೇಳೆ ಹಿಡಿದಿದ್ದ ಗಣೇಶ ಮೂರ್ತಿ ಇನ್ನೂ ಪ್ರತಿಷ್ಠಾಪನೆಯಾಗಿರಲಿಲ್ಲ. ಹೀಗಾಗಿ ಚಪ್ಪಲಿ ಧರಿಸಿಕೊಂಡು ಮೂರ್ತಿ ಹಿಡಿದಿದ್ದರಲ್ಲಿ ಯಾವುದೇ ತಪ್ಪಿಲ್ಲ. ರಸ್ತೆಯಲ್ಲಿ ಪ್ರತಿಭಟನೆ ನಡೆಸುವ ಸಂದರ್ಭದಲ್ಲಿ ಚಪ್ಪಲಿ ಧರಿಸಿದ್ದೆವು ಅಷ್ಟೇ. ಈ ವಿಚಾರವನ್ನು ವಿವಾದವನ್ನಾಗಿ ಮಾಡಬೇಕಿಲ್ಲ ಎಂದು ಹೇಳಿದರು.