ವಿಧಾನಸೌಧದಲ್ಲಿ ಬಿಡದಿ ಟೌನ್‌ಶಿಪ್ ಸಾಧಕ ಬಾಧಕ ಚರ್ಚೆ ಆಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ತಿಳಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಎಲ್ಲೆಲ್ಲೋ ಕುಳಿತು ಬಿಡದಿ ಟೌನ್‌ಶಿಪ್ ವಿಚಾರ ಚರ್ಚೆ ಮಾಡಲು ಸಾಧ್ಯವಿಲ್ಲ ಎಂದರು.
ಸಂಪುಟ ಮರು ರಚನೆ ಬಗ್ಗೆ ಮುಖ್ಯಮಂತ್ರಿ ಹಾಗೂ ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ. ಯಾವಾಗ ಅದು ನಡೆಯುತ್ತದೆ ಎಂದು ಹೇಳಲು ನಾನು ಜ್ಯೋತಿಷಿ ಅಲ್ಲ ಎಂದು ಹೇಳಿದರು.
ಆರ್‌ಎಸ್‌ಎಸ್ ನೋಂದಣಿ ಮಾಡಲಿ:
ಸಚಿವ ಪ್ರಿಯಾಂಕ ಖರ್ಗೆ ವಿರುದ್ಧ ಎ್ಐಆರ್ ದಾಖಲಿಸಲು ಕೋರ್ಟ್ ಸೂಚನೆ ನೀಡಿರುವ ಸಂಬಂಧ ಮಾತನಾಡಿದ ಅವರು, ಪ್ರಶ್ನೆ ಕೇಳಿದವರ ಮೇಲೆ ಕಾನೂನಾತ್ಮಕ ಕ್ರಮಕ್ಕೆ ಒತ್ತಾಯಿಸುವ ಆರ್‌ಎಸ್‌ಎಸ್‌ನವರು ಮೊದಲು ನೋಂದಣಿ ಮಾಡಿಸಲಿ ಎಂದು ತಿರುಗೇಟು ನೀಡಿದರು.
ದೇಶದ ಕಾನೂನಿಗೆ ನಾವು ಯಾವತ್ತೂ ತಲೆ ಬಾಗುತ್ತೇವೆ. ಗಾಂಧಿಯನ್ನು ಆರ್‌ಎಸ್‌ಎಸ್ ಟಾರ್ಗೆಟ್ ಮಾಡಿತ್ತು. ಅಲ್ಲದೆ, ಆರ್‌ಎಸ್‌ಎಸ್ ಬ್ರಿಟಿಷರ ಪರ ಇತ್ತು. ಕಾನೂನಾತ್ಮಕವಾಗಿ ಪ್ರಶ್ನೆ ಮಾಡುವವರನ್ನು ಆರ್‌ಎಸ್‌ಎಸ್ ಯಾವಾಗಲೂ ಟಾರ್ಗೆಟ್ ಮಾಡುತ್ತದೆ. ಇದಕ್ಕೆಲ್ಲ ನಾವ್ಯಾರೂ ಹೆದರುವುದಿಲ್ಲ ಎಂದರು.
ಚಿಕ್ಕಬಳ್ಳಾಪುರದಲ್ಲಿ ಶಾಸಕ ಪ್ರದೀಪ್ ಈಶ್ವರ್ ಮೇಲೆ ನಡೆದ ಗಲಾಟೆ ವಿಚಾರದ ಬಗ್ಗೆ ಮಾತನಾಡಿ, ಯಾರೂ ಕಾನೂನು ಕೈಗೆತ್ತುಕೊಳ್ಳಬಾರದು. ಎಲ್ಲರಿಗೂ ಪ್ರಶ್ನೆ ಮಾಡುವ ಹಕ್ಕಿದೆ. ಪ್ರಶ್ನೆ ಮಾಡುವುದನ್ನೇ ತಪ್ಪು ಎಂದರೆ ಹೇಗೆ? ಈ ರೀತಿಯ ಘಟನೆ ನಡೆಯಬಾರದಿತ್ತು ಎಂದು ವಿಷಾದ ವ್ಯಕ್ತಪಡಿಸಿದರು.