ಕ್ರಿಕೆಟ್ ಪಂದ್ಯಾವಳಿಯಲ್ಲಿ ವಳಗೆರೆ ಈಗಲ್ ತಂಡ ಗೆಲುವು

ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ವಾಯುಪುತ್ರ ಡೆವಲಪರ್ ಸಂಸ್ಥೆಯಿಂದ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪ್ರಶಸ್ತಿ ಪಡೆದ ತಂಡಗಳಿಗೆ ಬಹುಮಾನ ವಿತರಿಸಲಾಯಿತು.
ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ವಾಯುಪುತ್ರ ಡೆವಲಪರ್ ಸಂಸ್ಥೆಯಿಂದ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪ್ರಶಸ್ತಿ ಪಡೆದ ತಂಡಗಳಿಗೆ ಬಹುಮಾನ ವಿತರಿಸಲಾಯಿತು.
Published on
ನಂಜನಗೂಡು: ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಮೂರು ದಿನಗಳ ಕಾಲ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಮೊದಲನೇ ಬಹುಮಾನ ಪಡೆದ ವಳಗೆರೆ ಈಗಲ್ ತಂಡ ಮೊದಲನೇ ಬಹುಮಾನದೊಂದಿಗೆ ಒಂದು ಲಕ್ಷ ರೂ. ನಗದು, ಹುಣಸೂರಿನ ಚೇತನ್ ಕ್ರಿಕೆಟ್ ತಂಡಕ್ಕೆ ಎರಡನೇ ಬಹುಮಾನ 50 ಸಾವಿರ ರೂ., ಕಡಕೋಳ ಕ್ರಿಕೆಟ್ ತಂಡಕ್ಕೆ ಮೂರನೇ ಬಹುಮಾನವಾಗಿ 10,000 ರೂ. ಹಾಗೂ ಟ್ರೋಫಿಗಳನ್ನು ನೀಡಲಾಯಿತು.
ಶಾಸಕ ದರ್ಶನ್ ಧ್ರುವನಾರಾಯಣ, ಮಾಜಿ ಶಾಸಕ ಕಳಲೆ ಶಿವಮೂರ್ತಿ, ಬಿ.ಹರ್ಷವರ್ಧನ್, ವಾಯುಪುತ್ರ ಡೆವಲಪರ್ ಸಂಸ್ಥೆ ಚೆಲುವರಾಜು, ಬಾಲರಾಜು, ಚಿಕ್ಕರಂಗನಾಯಕ, ಮಹೇಂದ್ರ, ಶಿವಕುಮಾರ್, ಜಯರಾಮ್, ಮನು, ರಾಜೇಶ್, ಮಹದೇವಸ್ವಾಮಿ ಸೇರಿದಂತೆ ಮತ್ತಿತರರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net