ದೇಶದ ಶೈಕ್ಷಣಿಕ ಪ್ರಗತಿಗೆ ಶ್ರಮಿಸಿ

ಎಚ್. ಡಿ. ಕೋಟೆ  ಸರ್ಕಾರಿ ಪದವಿ ಪೂರ್ವಕಾಲೇಜಿನಲ್ಲಿ ಶುಕ್ರವಾರ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ತಾಲೂಕು ಘಟಕವನ್ನು ಉದ್ಘಾಟಿಸಲಾಯಿತು. ಸಂಘದ ಜಿಲ್ಲಾಧ್ಯಕ್ಷ ಎಂ.ಎಂ. ಮಹದೇವ, ತಾಲೂಕು ಅಧ್ಯಕ್ಷ ಚನ್ನಪ್ಪ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಡಾ. ಆಶಾ ಇತರರು ಇದ್ದರು.
ಎಚ್. ಡಿ. ಕೋಟೆ ಸರ್ಕಾರಿ ಪದವಿ ಪೂರ್ವಕಾಲೇಜಿನಲ್ಲಿ ಶುಕ್ರವಾರ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ತಾಲೂಕು ಘಟಕವನ್ನು ಉದ್ಘಾಟಿಸಲಾಯಿತು. ಸಂಘದ ಜಿಲ್ಲಾಧ್ಯಕ್ಷ ಎಂ.ಎಂ. ಮಹದೇವ, ತಾಲೂಕು ಅಧ್ಯಕ್ಷ ಚನ್ನಪ್ಪ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಡಾ. ಆಶಾ ಇತರರು ಇದ್ದರು.
Published on
ಎಚ್.ಡಿ.ಕೋಟೆ : ಉಪನ್ಯಾಸಕರು ದೇಶದ ಶೈಕ್ಷಣಿಕ ಪ್ರಗತಿಗಾಗಿ ಶ್ರಮಿಸಬೇಕು ಎಂದು ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಜಿಲ್ಲಾ ಅಧಕ್ಷ ಎಂ. ಎಂ. ಮಹದೇವ ತಿಳಿಸಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವಕಾಲೇಜಿನಲ್ಲಿ ಶುಕ್ರವಾರ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ನೂತನ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದರು. ಉಪನ್ಯಾಸಕರ ಸಂಘವು ಬೌದ್ಧಿಕ ಶಕ್ತಿಯ ಮೂಲವಾಗಬೇಕು. ಸಮಾಜದ ಒಳಿತಿಗಾಗಿ ಸ್ಪಂದಿಸಬೇಕು. ಸದಸ್ಯರೆಲ್ಲರೂ ಸಂಘಟಿತರಾಗಿ ಹಕ್ಕುಗಳಿಗಾಗಿ ಹೋರಾಡಬೇಕು ಎಂದರು.
ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಡಾ. ಆಶಾ ಮಾತನಾಡಿ, ಯಾವುದೇ ಸಂಘಟನೆಯ ಯಶಸ್ಸು ನಿಂತಿರುವುದು ಅದರ ಸದಸ್ಯರ ಪ್ರಾಮಾಣಿಕ ಸ್ಪಂದನೆ ಮತ್ತು ನಂಬಿಕೆಯ ಮೇಲೆ ಎಂದರು. ನಾವೆಲ್ಲರೂ ತಾರತಮ್ಯ ಮರೆತು
ಉದ್ದೇಶಿತ ಗುರಿಯತ್ತ ಹೆಜ್ಜೆ ಇಟ್ಟರೆ ಸಾಧನೆ ಮಾಡ ಬಹುದು ಎಂದರು. ಸಂಘಟನೆಯ ಶಕ್ತಿ ಹೆಚ್ಚಿದರೆ ಶಿಕ್ಷಣ ರಂಗಕ್ಕೆ
ದೊಡ್ಡ ಕೊಡುಗೆಯಾಗುತ್ತದೆ ಎಂದರು.
ಪದಾಧಿಕಾರಿಗಳ ಆಯ್ಕೆ : ಇದೇ ಸಂದರ್ಭದಲ್ಲಿ ಉಪನ್ಯಾಸಕರ ಸಂಘದ ತಾಲೂಕು ಘಟಕದ ಗೌರವ ಅಧ್ಯಕ್ಷರಾಗಿ ಚಿಕ್ಕಣ್ಣ, ಅಧ್ಯಕ್ಷ ಚನ್ನಪ್ಪ, ಕಾರ್ಯಧ್ಯಕ್ಷರಾಗಿ ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಗಣೇಶ್, ಖಜಾಂಚಿಯಾಗಿ ಯೋಗೇಶ್ ಬಾಬು, ಉಪಾಧ್ಯಕ್ಷರಾಗಿ ಗುಣ, ಪ್ರಧಾನ ಸಂಘಟನಾ ಕಾರ್ಯದರ್ಶಿಯಾಗಿ ಶಿವಣ್ಣ, ಕಾರ್ಯದರ್ಶಿಯಾಗಿ ಪುಟ್ಟಸ್ವಾಮಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಎಚ್.ಡಿ.ಕೋಟೆ ಮತ್ತು ಸರಗೂರು ತಾಲೂಕಿನ ಘಟಕಗಳ ಉಪನ್ಯಾಸಕರು, ಜಿಲ್ಲಾ ಸಂಘದ ಪದಾಧಿಕಾರಿಗಳು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net