ಮೈಸೂರು: ಯುವಕನ ಕೊಲೆಗೆ ಯತ್ನಿಸಿದ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕ್ಯಾತಮಾರನಹಳ್ಳಿಯ ನಿವಾಸಿಗಳಾದ ವಿನೋದ್, ರಾಕೇಶ್ ಬಂಧಿತರು. ಆರೋಪಿಗಳು ಲಲಿತಾದ್ರಿಪುರದ ನಿವಾಸಿ ಗಗನ್ ಅವರ ಕೊಲೆಗೆ ಯತ್ನಿಸಿ ಸಿಕ್ಕಿ ಬಿದ್ದಿದ್ದಾರೆ. ಹುಡುಗಿಯ ವಿಚಾರವಾಗಿ ಈ ಗಲಾಟೆ ನಡೆದಿದ್ದು, ಗಗನ್ ಮನೆಗೆ ನುಗ್ಗಿದ ರಾಕೇಶ್ ಮತ್ತು ಆತನ ಸ್ನೇಹಿತರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಅಷ್ಟರಲ್ಲಿ ನೆರೆಯ ನಿವಾಸಿಗಳು ಬಂದಿದ್ದು, ಆಟೋದಲ್ಲಿ ಪರಾರಿಯಾಗಿದ್ದಾರೆ. ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.