ವಿವೇಕಾನಂದ, ಅಂಬೇಡ್ಕರ್‌ರಿಂದ ಭಾರತಕ್ಕೆ ಗೌರವ:ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್ ಹೇಳಿಕೆ

ನಗರದ ಕೃಷ್ಣಮೂರ್ತಿಪುರಂನಲ್ಲಿರುವ ನಮನ ಕಲಾಮಂಟಪದಲ್ಲಿ ಆಯೋಜಸಿದ್ದ ಕಾರ್ಯಕ್ರಮದಲ್ಲಿ ಎಸ್.ನಿಹಾಲ್ ಅವರನ್ನು ಗೌರವಿಸಲಾಯಿತು. ಮಡ್ಡೀಕೆರೆಗೋಪಾಲ್, ರಘುರಾಂ ವಾಜಪೇಯಿ, ಗೋಲ್ಡ್ ಸುರೇಶ್, ಮೂಗೂರು ನಂಜುಂಡಸ್ವಾಮಿ, ದಯಾನಂದ ಪಟೇಲ್, ಗಿರೀಶ್‌ಗೌಡ, ಬಸವರಾಜೇಂದ್ರಸ್ವಾಮಿ ಇತರರು ಇದ್ದರು.
ನಗರದ ಕೃಷ್ಣಮೂರ್ತಿಪುರಂನಲ್ಲಿರುವ ನಮನ ಕಲಾಮಂಟಪದಲ್ಲಿ ಆಯೋಜಸಿದ್ದ ಕಾರ್ಯಕ್ರಮದಲ್ಲಿ ಎಸ್.ನಿಹಾಲ್ ಅವರನ್ನು ಗೌರವಿಸಲಾಯಿತು. ಮಡ್ಡೀಕೆರೆಗೋಪಾಲ್, ರಘುರಾಂ ವಾಜಪೇಯಿ, ಗೋಲ್ಡ್ ಸುರೇಶ್, ಮೂಗೂರು ನಂಜುಂಡಸ್ವಾಮಿ, ದಯಾನಂದ ಪಟೇಲ್, ಗಿರೀಶ್‌ಗೌಡ, ಬಸವರಾಜೇಂದ್ರಸ್ವಾಮಿ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸ್ವಾಮಿ ವಿವೇಕಾನಂದರು, ಡಾ.ಬಿ.ಆರ್.ಅಂಬೇಡ್ಕರ್ ಅವರಿಂದ ಹೊರ ಜಗತ್ತಿಗೆ ಭಾರತ ಬೇರೆಯಾಗಿಯೇ ಕಾಣುತ್ತದೆ
  • ನಾವುಗಳು ಸರಿಯಾಗಿ ವಿವೇಕಾನಂದರ, ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ವಿಶ್ವೇಶರಯ್ಯ ಸೇರಿದಂತೆ ಅನೇಕರ ಮಹನೀಯರನ್ನು ಜಾತಿ ಸೇರಿದಂತೆ ನಾನಾ ಕಾರಣದಿಂದ ಸರಿಯಾಗಿ ಓದುತ್ತಿಲ್ಲ

ಮೈಸೂರು:

ಸ್ವಾಮಿ ವಿವೇಕಾನಂದರು ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರಿಂದ ಹೊರ ಜಗತ್ತು ಭಾರತವನ್ನು ನೋಡುವ ದೃಷ್ಟಿಕೋನವೇ ಬದಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್ ಹೇಳಿದರು.

ನಗರದ ಕೃಷ್ಣಮೂರ್ತಿಪುರಂನಲ್ಲಿರುವ ನಮನ ಕಲಾಮಂಟಪದಲ್ಲಿ ಶ್ರೀ ಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಆಯೋಜಿಸಿದ್ದ ಸ್ವಾಮಿ ವಿವೇಕಾನಂದ ಸ್ಮರಣಾ ಮಹೋತ್ಸವ ಹಾಗೂ ವಿವೇಕ ಯುವ ಸಿರಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಬ್ರಿಟಿಷರ ದಾಸ್ಯದಲ್ಲಿದ್ದ ಭಾರತ ಹೊರ ದೇಶಗಳ ದೃಷ್ಟಿಯಲ್ಲಿ ಕಡೆಗಣಿಸಲ್ಪಡುತ್ತಿತ್ತು. ಆದರೆ ವಿಶ್ವಧರ್ಮ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರು ಮಾಡಿದ ಭಾಷಣ, ವಿದೇಶದಲ್ಲಿ ಕಲಿಯುವಾಗ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುಸ್ತಕ ಜ್ಞಾನ ಪ್ರೀತಿ ವಿದೇಶಿಗರನ್ನು ಭಾರತದ ಬಗ್ಗೆ ಗೌರವ ಮೂಡುವಂತೆ ಮಾಡಿತು ಎಂದರು.
ವಿವೇಕಾನಂದರು ಓದುವ ಶಕ್ತಿಯು ಬಹಳ ಚೆನ್ನಾಗಿತ್ತು. ಮಕ್ಕಳು ಅದನ್ನು ಮೊದಲು ತಿಳಿದುಕೊಳ್ಳಬೇಕು. ಓದುವುಕ್ಕೆ ಕುಳಿತಾದ ಎಲ್ಲವನ್ನೂ ಮರೆತು ಕೇವಲ ಪುಸ್ತಕ ಓದುವುದರಲ್ಲಿ ತಲ್ಲಿನರಾಗುತ್ತಿದ್ದರು ಎಂದು ಹೇಳಿದರು.
ವಿಶ್ವದ ಅನೇಕ ದೇಶಗಳಲ್ಲಿ ವಿವೇಕಾನಂದರ ಪ್ರತಿಮೆಗಳು ಗೋಚರಿಸುತ್ತದೆ. ವಿವೇಕಾನಂದರ ಬಗ್ಗೆ ವಿಶ್ವದ ಬೇರೆ ಬೇರೆ ದೇಶದ ಚಿಂತಕರು ಬರೆದ ಅನೇಕ ಕೃತಿಗಳು ನಮಗೆ ಕಾಣಸಿಗುತ್ತದೆ. ಆದರೆ ನಾವುಗಳು ಸರಿಯಾಗಿ ವಿವೇಕಾನಂದರ, ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ವಿಶ್ವೇಶರಯ್ಯ ಸೇರಿದಂತೆ ಅನೇಕರ ಮಹನೀಯರನ್ನು ಜಾತಿ ಸೇರಿದಂತೆ ನಾನಾ ಕಾರಣದಿಂದ ಸರಿಯಾಗಿ ಓದುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕರಾಟೆಯ ವಿವಿಧ ಸ್ಪರ್ಧೆಯಲ್ಲಿ ಪ್ರಶಸ್ತಿಯನ್ನು ಗೆದ್ದಿರುವ ವಿದ್ಯಾರ್ಥಿ ಎಸ್.ನಿಹಾಲ್ಗೆ ವಿವೇಕ ಯುವ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕನ್ನಡ ಹೋರಾಟಗಾರ ಮೂಗೂರು ನಂಜುಂಡಸ್ವಾಮಿ, ಸಮಾಜ ಸೇವಕ ಕೆ.ರಘುರಾಂ ವಾಜಪೇಯಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ದಯಾನಂದ ಪಟೇಲ್, ಲಯನ್ಸ್ ಗೋಲ್ಡ್ ಸುರೇಶ್, ಬಿಜೆಪಿ ಕೆ.ಆರ್.ಕ್ಷೇತ್ರದ ಕಾರ್ಯದರ್ಶಿ ಗಿರೀಶ್‌ಗೌಡ, ಅನುರಾಗ ಮಕ್ಕಳ ಮನೆಯ ಡಿ.ಬಿ.ಸೋಮಶೇಖರ್, ಶ್ರೀಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಬಸವರಾಜೇಂದ್ರಸ್ವಾಮಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net