ರೈಲುಗಳು ಭಾಗಶಃ ರದ್ದು

 ರೈಲು ಸೇವೆ
ರೈಲು ಸೇವೆ
Published on

ಪ್ರಮುಖ ಮುಖ್ಯಾಂಶಗಳು

  • ನಿರ್ವಹಣಾ ಕಾರ್ಯ ಹಿನ್ನೆಲೆ
ಮೈಸೂರು: ಗದಗ-ಹೊಟಗಿ ವಿಭಾಗದ ನಡುವೆ ನಿರ್ವಹಣಾ ಕಾರ್ಯಗಳ ಹಿನ್ನೆಲೆಯಲ್ಲಿ ಕೆಳಕಂಡ ರೈಲು ಸೇವೆಗಳನ್ನು ಭಾಗಶಃ ರದ್ದುಪಡಿಸಲಾಗಿವೆ.
ಮಂಗಳೂರು ಸೆಂಟ್ರಲ್-ವಿಜಯಪುರ ಎಕ್ಸ್‌ಪ್ರೆಸ್(17378) ರೈಲಿನ ಬಾಗಲಕೋಟೆ ಮತ್ತು ವಿಜಯಪುರ ನಡುವಿನ ಸೇವೆಯನ್ನು ಮಾ.24ವರೆಗೆ ಭಾಗಶಃ ರದ್ದುಪಡಿಸಲಾಗಿದ್ದು, ಈ ರೈಲು ಬಾಗಲಕೋಟೆವರೆಗೆ ಮಾತ್ರ ಸಂಚರಿಸಲಿದೆ.
ವಿಜಯಪುರ -ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ರೈಲು(17377)- ಮಾ.20ರಿಂದ 25ರ ವರೆಗೆ ವಿಜಯಪುರ ಮತ್ತು ಬಾಗಲಕೋಟೆ ನಡುವಿನ ಸೇವೆಯನ್ನು ಭಾಗಶಃ ರದ್ದುಪಡಿಸಲಾಗಿದ್ದು, ವಿಜಯಪುರ ಬದಲು ಬಾಗಲಕೋಟೆಯಿಂದ ತನ್ನ ಪ್ರಯಾಣ ಆರಂಭಿಸಲಿದೆ.
ಯಶವಂತಪುರ -ವಿಜಯಪುರ ಎಕ್ಸ್‌ಪ್ರೆಸ್(16547 ) ರೈಲು- ಮಾ.23 ಮತ್ತು 24ರಂದು ಬಾಗಲಕೋಟೆ ಮತ್ತು ವಿಜಯಪುರ ನಡುವಿನ ಸೇವೆಯನ್ನು ಭಾಗಶಃ ರದ್ದುಪಡಿಸಲಾಗಿದೆ. 
ಈ ರೈಲು ಬಾಗಲಕೋಟೆವರೆಗೆ ಸಂಚರಿಸಲಿದೆ.
ವಿಜಯಪುರ- ಯಶವಂತಪುರ ಎಕ್ಸ್‌ಪ್ರೆಸ್(16548) ರೈಲು- ಮಾ.24 ಮತ್ತು 25ರಂದು ವಿಜಯಪುರ ಮತ್ತು ಬಾಗಲಕೋಟೆ ನಡುವಿನ ಸೇವೆಯನ್ನು ಭಾಗಶಃ ರದ್ದುಪಡಿಸಲಾಗಿದ್ದು, ವಿಜಯಪುರ ಬದಲು ಬಾಗಲಕೋಟೆಯಿಂದ ತನ್ನ ಪ್ರಯಾಣ ಆರಂಭಿಸಲಿದೆ.
 ಮೈಸೂರು-ಬಾಗಲಕೋಟೆ ಎಕ್ಸ್‌ಪ್ರೆಸ್(17307) ರೈಲು- ಮಾ.23 ಮತ್ತು 24ರಂದು ವಿಜಯಪುರ ಮತ್ತು ಬಾಗಲಕೋಟೆ ನಡುವಿನ ಸೇವೆಯನ್ನು ಭಾಗಶಃ ರದ್ದುಪಡಿಸಲಾಗಿದ್ದು, ಈ ರೈಲು ವಿಜಯಪುರವರೆಗೆ ಸಂಚರಿಸಲಿದೆ.
ಬಾಗಲಕೋಟೆ-ಮೈಸೂರು ಎಕ್ಸ್‌ಪ್ರೆಸ್(17308 ) ರೈಲು- ಮಾ.24, 25ರಂದು ಬಾಗಲಕೋಟೆ ಮತ್ತು ವಿಜಯಪುರ ನಡುವಿನ ಸೇವೆಯನ್ನು ಭಾಗಶಃ ರದ್ದುಪಡಿಸಲಾಗಿದ್ದು, ಈ ರೈಲು ಬಾಗಲಕೋಟೆ ಬದಲಾಗಿ ವಿಜಯಪುರದಿಂದ ತನ್ನ ಪ್ರಯಾಣ ಆರಂಭಿಸಲಿದೆ.
ವಿಜಯಪುರ-ಯಶವಂತಪುರ ಎಕ್ಸ್‌ಪ್ರೆಸ್ (16548 )ರೈಲು- ಮಾ.23ರಂದು 40 ನಿಮಿಷಗಳ ಕಾಲ ವಿಳಂಬವಾಗಿ ಹೊರಡಲಿದೆ ಎಂದು ಮೈಸೂರು ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಗಿರೀಶ ಧರ್ಮರಾಜ ಕಲಗೊಂಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net