ಮೈಸೂರಿನಲ್ಲಿ ಟ್ರಾಫಿಕ್ ಸಿಗ್ನಲ್ ಲೈಟ್ ಅಳವಡಿಕೆಯಿಂದ ಸಮಸ್ಯೆಯಾಗಿಲ್ಲ

ಡಾ.ಎಚ್.ಸಿ.ಮಹದೇವಪ್ಪ
ಡಾ.ಎಚ್.ಸಿ.ಮಹದೇವಪ್ಪ
Published on

ಪ್ರಮುಖ ಮುಖ್ಯಾಂಶಗಳು

  • ಪೊಲೀಸರ ಕ್ರಮವನ್ನು ಸಮರ್ಥಿಸಿಕೊಂಡ ಸಚಿವ
  • ಭವಿಷ್ಯದ ಮೈಸೂರಿನ ದೃಷ್ಟಿಯಿಂದ ಈ ವ್ಯವಸ್ಥೆ
ಮೈಸೂರು; ಮೈಸೂರು ನಗರದಲ್ಲಿ ಟ್ರಾಫಿಕ್ ಸಿಗ್ನಲ್ ಲೈಟ್ ಹಾಕಿರುವುದರಿಂದ ಜನರಿಗೆ ಸಮಸ್ಯೆಯಾಗಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಪೊಲೀಸರ ಕ್ರಮವನ್ನು ಸಮರ್ಥಿಸಿಕೊಂಡರು.
ಮೈಸೂರು ನಗರದಲ್ಲಿ ವೈಜ್ಞಾನಿಕವಾಗಿಯೇ ಎಲ್ಲ ಕಡೆ ಸಿಗ್ನಲ್ ಲೈಟ್ ಹಾಕಲಾಗಿದೆ. ಭವಿಷ್ಯದ ಮೈಸೂರಿನ ದೃಷ್ಟಿಯಿಂದ ಈ ವ್ಯವಸ್ಥೆ ಮಾಡಿದೆ.  ಈ ಕ್ರಮದಿಂದಾಗಿ ಟ್ರಾಫಿಕ್ ಸಮಸ್ಯೆ ಬಗೆಹರಿದಿದೆ. 
ಮೈಸೂರಿನ ಬೆಳವಣಿಗೆ ದೃಷ್ಟಿಯಿಂದಲೂ ಇದು ಅವಶ್ಯಕತೆ ಇತ್ತು. ಇದನ್ನು ಆಧಾರಿಸಿ ಸಿಗ್ನಲ್ ಲೈಟ್ ಹಾಕಲಾಗಿದೆ. ಕೆಲವೊಂದು ಕಡೆ ಬೇಕಾದರೆ ಎರಡು ನಿಮಿಷದ ಅವಧಿಯನ್ನು ಕಡಿತ ಮಾಡಲು ಸೂಚನೆ ಕೊಡುತ್ತೇನೆ ಎಂದು ತಿಳಿಸಿದರು.

ಡ್ರಗ್ಸ್ ಹಾವಳಿಗೆ ಮಾರು ಹೋಗಬೇಡಿ: 

ಮೈಸೂರಿಲ್ಲಿ ಹೆಚ್ಚುತ್ತಿರುವ ಡ್ರಗ್ಸ್ ಹಾವಳಿ ಕುರಿತು ಪ್ರತಿಕ್ರಿಯಿಸಿದ ಅವರು, ಮಾದಕ ವಸ್ತುಗಳ ಸೇವನೆಯಿಂದ ಯುವಜನತೆ ಹಾಳಾಗುವುದನ್ನು ತಪ್ಪಿಲು ಪೊಲೀಸ್ ಇಲಾಖೆ ಕೆಲಸ ಮಾಡುತ್ತಿದ್ದು, ಇಲ್ಲಿ ಸಿಎಂ ತವರು ಎಂಬ ವಿಚಾರ ಬರೋದಿಲ್ಲ ಎಂದು ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು. 
ಮಾದಕ ವಸ್ತುಗಳು ಎಲ್ಲ ಕಡೆ ವ್ಯಾಪಕವಾಗಿದೆ. ಯುವಕರು ಅದಕ್ಕೆ ಮಾರು ಹೋಗುತ್ತಿದ್ದಾರೆ. ಯುವಕರನ್ನು ಸಮಾಜದ ಕಟ್ಟುಪಾಡಿಗೆ ಕರೆತರಬೇಕು. ಆ ನಿಟ್ಟಿನಲ್ಲಿ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ ಎಂದರು.
ಗೆಲುವು ನಮ್ಮದೇ: 
ಉಪಚುನಾವಣೆ ನಡೆಯುವ ಎರಡು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲ್ಲುತ್ತದೆ. ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಮೆಚ್ಚಿ ಜನ ಮತ ಕೊಡುತ್ತಾರೆ. ಬಿಜೆಪಿಯವರು ಗೆಲ್ಲುತ್ತೇವೆ ಅಂತಾರೆ. ಸೋಲ್ತೇವೆ ಅಂತ ಹೇಳ್ತಾರಾ? ಎಂದು ವ್ಯಂಗ್ಯವಾಡಿದರು. ಎರಡೂ ಕ್ಷೇತ್ರಗಳಲ್ಲೂ ಜನ ಕಾಂಗ್ರೆಸ್ ಕೈ ಹಿಡಿಯುವ ವಿಶ್ವಾಸ ಇದೆ ಎಂದು ಪ್ರಶ್ನೆವೊಂದಕ್ಕೆ ಉತ್ತರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net