ಎಸಿಎಫ್ ಪರಮೇಶ್ ಪ್ರತಿಕ್ರಿಯಿಸಿ ಇಂದಿನಿಂದಲೇ ಕೂಂಬಿಂಗ್ ಚುರುಕುಗೊಳಿಸಲಾಗುವುದು. ಗಾಯಾಗೊಂಡ ವ್ಯಕ್ತಿಗೆ ಇಲಾಖೆಯಿಂದಲೇ ಚಿಕಿತ್ಸೆ ಕೊಡಿಸಲಾಗುವುದು. ಪರಿಹಾರ ನೀಡಲು ಉನ್ನತ ಅಧಿಕಾರಿ ಗಳೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು. ಸರಗೂರು ಠಾಣೆಯ ವೃತ್ತ ನಿರೀಕ್ಷಕ ಪ್ರಸನ್ನ ಕುಮಾರ್, ಮುಖಂಡರಾದ ಜೀವಿಕಾ ಮಹೇಶ್, ಲೋಕೇಶ್ ಮತ್ತು ಗ್ರಾಮಸ್ಥರು ಹಾಜರಿದ್ದರು.