ಹುಲಿ ದಾಳಿಗೆ ಹಸು ಬಲಿ

ಹುಲಿ ದಾಳಿಗೆ ಬಲಿಯಾದ ಹಸು
ಹುಲಿ ದಾಳಿಗೆ ಬಲಿಯಾದ ಹಸು
Published on
ಸರಗೂರು.: ತಾಲೂಕಿನ ಹೆಗ್ಗನೂರು ಗ್ರಾಮದಲ್ಲಿ ಮನೆ ಸಮೀಪದ ಕಬ್ಬಿನ ಗದ್ದೆಯಲ್ಲಿ ಮೇಯಲು ಬಿಟ್ಟಿದ್ದ ಹಸುವಿನ ಮೇಲೆ ಹುಲಿ ದಾಳಿ ಮಾಡಿ ಬಲಿ ತೆಗೆದುಕೊಂಡಿದೆ.
ಗ್ರಾಮದ ಕಂಡೇಗೌಡ ಎಂಬುವರ ಶನಿವಾರ ಹಸುವನ್ನು ಮೇಯಲು ಬಿಟ್ಟು ಮನೆಯೊಳಗೆ ತೆರಳಿದ್ದರು.
ಈ ಸಂದರ್ಭ ಹುಲಿ ದಾಳಿ ನಡೆಸಿ ಹಸುವನ್ನು ಕೊಂದು ಹಾಕಿದೆ. ಇದರಿಂದ ಸ್ಥಳೀಯರು ಭಯ ಭೀತರಾಗಿದ್ದಾರೆ. ಹುಲಿಯನ್ನು ಶೀಘ್ರ ಸೆರೆ ಹಿಡಿಯುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಕಳೆದ ತಿಂಗಳು ಹುಲಿ ಕಾಣಿಸಿಕೊಂಡು ಒಂದು ಹಸು ಮತ್ತು ಕರು ಬಲಿ ಪಡೆದಿತ್ತು. ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ದಿಂದಲೇ ಹುಲಿ ಬಾಯಿಗೆ ಜಾನುವಾರು ಆಹಾರ ವಾಗುತ್ತಿದ್ದು,
ಅರಣ್ಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಪರಿಶೀಲನೆ ನಡೆಸಲು ಮತ್ತು ಪರಿಹಾರ ನೀಡಲು ಮುಂದಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ಈ ಭಾಗದ ಜಮೀನಲ್ಲಿ ಕೆಲಸ ಹೆಂಗಸರು ಮಕ್ಕಳು ಕೆಲಸ ಮಾಡಲು ಭಯಭೀತರಾಗಿದ್ದಾರೆ. ಶೀಘ್ರವೇ ಕ್ರಮ ವಹಿಸದಿದ್ದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net