ಭಕ್ತರ ದೇವಾಲಯದ ಆವರಣವನ್ನು ಸುತ್ತುವರಿದು ಬಿಸಿಲನ್ನೂ ಲೆಕ್ಕಿಸದೆ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು
Published on:
Copied
Follow Us
ಮೂಗೂರು:ಆಷಾಢ ಶುಕ್ರವಾರದ ಹಿನ್ನೆಲೆ ಗ್ರಾಮದ ಶ್ರೀತ್ರಿಪುರ ಸುಂದರಿ ಅಮ್ಮನವರಿಗೆ ಹೂವಿನ ಸೀರೆ ಅಲಂಕಾರ ಹಾಗೂ ಶ್ರೀ ದೇಶೇಶ್ವರಸ್ವಾಮಿ ದೇಗುಲದ ಶ್ರೀ ಪಾರ್ವತಿ ಅಮ್ಮನವರಿಗೆ ವೀಳ್ಯದೆಲೆ ಸೀರೆ ಅಲಂಕಾರದ ವಿಶೇಷ ಪೂಜೆ ಶ್ರದ್ಧಾಭಕ್ತಿಯಿಂದ ನೆರವೇರಿತು.
ಶುಕ್ರವಾರ ಬೆಳಗ್ಗೆ ಅಭಿಷೇಕ ಧಾರ್ಮಿಕ ಪೂಜಾ ಕೈಂಕರ್ಯಗಳು ವಿಧಿವತ್ತಾಗಿ ನಡೆದವು. ಅಮ್ಮನವರಿಗೆ ವಿವಿಧ ಬಗೆಯ ಹೂಗಳಿಂದ ಅಲಂಕರಿಸಿ ಮಹಾ ಮಂಗಳಾರತಿ ನೆರವೇರಿಸಿದ ಬಳಿಕ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು.
ರಾಜ್ಯ ನಾನಾ ಭಾಗಗಳಿಂದ ಆಗಮಿಸಿದ ಭಕ್ತರ ದೇವಾಲಯದ ಆವರಣವನ್ನು ಸುತ್ತುವರಿದು ಬಿಸಿಲನ್ನೂ ಲೆಕ್ಕಿಸದೆ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಗ್ರಾಮದಲ್ಲಿನ ವಿವಿಧ ದೇಗುಲಗಳಿಗೂ ಭಕ್ತರು ತೆರಳಿ ಇಷ್ಟಾರ್ಥ ಸಿದ್ಧಿಗಾಗಿ ವಿವಿಧ ರೀತಿಯ ಸೇವೆ ಹರಕೆ ಸಲ್ಲಿಸಿ ಪ್ರಾರ್ಥಿಸಿದರು.
ಉದ್ಯಮಿ ಮೂಗೂರು ಸುಧಾಕರ್ ಅವರು ದೇಗುಲವನ್ನು ಹೂಗಳಿಂದ ಅಲಂಕರಿಸಿದ್ದರು. ದಾನಿಗಳ ನೆರವಿನಿಂದ ಗ್ರಾಮಸ್ಥರು ಭಕ್ತರಿಗೆ ದೇವಸ್ಥಾನದ ಸಮೀಪ ಬೆಳಗ್ಗೆಯಿಂದ ಸಂಜೆವರೆಗೆ ಅನ್ನಸಂತರ್ಪಣೆ ಏರ್ಪಡಿಸಿದ್ದರು.