ಯುವ ಸಮೂಹ ಕ್ರೀಡೆಯತ್ತ ಒಲವು ಹೆಚ್ಚಿಸಿಕೊಳ್ಳಲಿ: ಸಚಿವ ಡಾ.ಎಚ್.ಸಿ.ಮಹದೇವಪ್ಪ ಸಲಹೆ

ನಗರದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಸೀನಿಯರ್ ಖೋ-ಖೋ ಚಾಂಪಿಯನ್‌ಷಿಪ್ 2026 ಪಂದ್ಯಾವಳಿಯಲ್ಲಿ ರಾಯಚೂರು ತಂಡಕ್ಕೆ ಡಾ.ಎಚ್.ಸಿ.ಮಹದೇವಪ್ಪ ಬಹುಮಾನ ವಿತರಿಸಿದರು. ಎಂ.ಕೆ.ಸೋಮಶೇಖರ್, ನಾಗರಾಜ್ ವಿ.ಬೈರಿ, ಡಾ.ಪಿ.ಶಿವರಾಜು, ಅಂಶಿ ಪ್ರಸನ್ನಕುಮಾರ್, ಜಿನೇಶ್, ಬಿ.ಸಣ್ಣೇಗೌಡ, ಸ್ವಾಮಿ ಇತರರು ಇದ್ದರು.
ನಗರದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಸೀನಿಯರ್ ಖೋ-ಖೋ ಚಾಂಪಿಯನ್‌ಷಿಪ್ 2026 ಪಂದ್ಯಾವಳಿಯಲ್ಲಿ ರಾಯಚೂರು ತಂಡಕ್ಕೆ ಡಾ.ಎಚ್.ಸಿ.ಮಹದೇವಪ್ಪ ಬಹುಮಾನ ವಿತರಿಸಿದರು. ಎಂ.ಕೆ.ಸೋಮಶೇಖರ್, ನಾಗರಾಜ್ ವಿ.ಬೈರಿ, ಡಾ.ಪಿ.ಶಿವರಾಜು, ಅಂಶಿ ಪ್ರಸನ್ನಕುಮಾರ್, ಜಿನೇಶ್, ಬಿ.ಸಣ್ಣೇಗೌಡ, ಸ್ವಾಮಿ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಯಾವುದೇ ಧರ್ಮ, ಜಾತಿ, ಮತ, ಬೇಧಗಳನ್ನು ನೋಡದೇ ಎಲ್ಲರನ್ನು ಒಂದೆಡೆಗೆ ಸೆಳೆಯುವ ಕಲೆ ಕ್ರೀಡೆಗೆ ಮಾತ್ರ
  • ಕ್ರಿಕೆಟ್‌ನ 20-20 ಮಾದರಿಯಲ್ಲಿ ಖೋ-ಖೋ ಆಟವಿದ್ದು, ಇತರೆ ಕ್ರೀಡೆಗಳನ್ನು ಮೀರಿಸುವ ಕೌಶಲ ಹೊಂದಿದೆ
ಮೈಸೂರು: ಎಲ್ಲರಲ್ಲಿ ಒಂದಾಗಿ ಬಾಳುವಂತೆ ಸಂದೇಶ ಸಾರುವುದು ಕ್ರೀಡೆಯಲ್ಲಿ ಯುವ ಸಮೂಹ ಕ್ರೀಡೆಯತ್ತ ಒಲವು ಹೆಚ್ಚಿಸಿಕೊಳ್ಳಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ಕರ್ನಾಟಕ ಅಮೇಚೂರ್ ಖೋ-ಖೋ ಸಂಸ್ಥೆಯ ಮಾಜಿ ಅಧ್ಯಕ್ಷ ಎನ್.ಪ್ರಕಾಶ್ ಸ್ಮರಣಾರ್ಥ ಕರ್ನಾಟಕ ಅಮೇಚೂರ್ ಖೋ-ಖೋ ಅಸೋಸಿಯೇಷನ್(ಕೆಎಕೆಕೆಎ) ಹಾಗೂ ಮೈಸೂರು ಜಿಲ್ಲಾ ಅಮೆಚೂರ್ ಖೋ-ಖೋ ಅಸೋಸಿಯೇಷನ್(ಎಂಡಿಎಕೆಕೆಎ)ನಿಂದ ನಗರದಲ್ಲಿ ಆಯೋಜಿಸಿದ್ದ ಎರಡು ದಿನಗಳ ಪುರುಷರ ರಾಜ್ಯಮಟ್ಟದ ಸೀನಿಯರ್ ಖೋ-ಖೋ ಚಾಂಪಿಯನ್‌ಷಿಪ್- 2026 ಸಮಾರೋಪದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಯಾವುದೇ ಧರ್ಮ, ಜಾತಿ, ಮತ, ಬೇಧಗಳನ್ನು ನೋಡದೇ ಎಲ್ಲರನ್ನು ಒಂದೆಡೆಗೆ ಸೆಳೆಯುವ ಕಲೆ ಕ್ರೀಡೆಗೆ ಮಾತ್ರ ಇದೆ. ಕ್ರಿಕೆಟ್‌ನ 20-20 ಮಾದರಿಯಲ್ಲಿ ಖೋ-ಖೋ ಆಟವಿದ್ದು, ಇತರೆ ಕ್ರೀಡೆಗಳನ್ನು ಮೀರಿಸುವ ಕೌಶಲ ಹೊಂದಿದೆ ಎಂದರು.
ಮಾಜಿ ಶಾಸಕ ಎಸ್.ಕೆ.ಸೋಮಶೇಖರ್ ಮಾತನಾಡಿ, ಕ್ರೀಡಾಪಟುಗಳ ಖೋ-ಖೋ ಆಟ ಎನ್.ಪ್ರಕಾಶ್ ಅವರನ್ನು ನೆನೆಯುವಂತೆ ಮಾಡಿತು. ಖೋ-ಖೋ ಮೂಲಕ ಕನ್ನಡದ ಕುಡಿಗಳು ರಾಜ್ಯ, ದೇಶ, ವಿದೇಶಗಳಲ್ಲಿ ಮಿಂಚುವಂತಾಗಲಿ ಎಂದು ಆಶಿಸಿದರು.
ಮೈಸೂರು ಜಿಲ್ಲಾ ಅಮೇಚೂರ್ ಖೋ-ಖೋ ಅಸೋಸಿಯೇಷನ್ ಅಧ್ಯಕ್ಷ ನಾಗರಾಜ್ ವಿ.ಬೈರಿ ಮಾತನಾಡಿ, ಖೋ-ಖೋ ನಮ್ಮ ದೇಶಿಯ ಕ್ರೀಡೆ. ಅದು ನಮ್ಮ ಅಸ್ಮಿತೆ. ಈ ಕ್ರೀಡೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವ ಕೆಲಸ ಆಗಬೇಕಿದೆ. ಆ ಮೂಲಕ ಈ ಕ್ರೀಡೆಯನ್ನು ಒಲಂಪಿಕ್‌ನಲ್ಲಿ ಸೇರಿಸುವಂತಾಗಬೇಕು ಎಂದು ಒತ್ತಾಯಿಸಿದರು.
ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ಶುಭ ಹಾರೈಸಿದರು. ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಮೈಸೂರು ಜಿಲ್ಲಾ ಅಮೇಚೂರ್ ಖೋ-ಖೋ ಅಸೋಸಿಯೇಷನ್ ಜಿನೇಶ್, ಅಚೀವಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಬಿ.ಸಣ್ಣೇಗೌಡ, ಶಿಕ್ಷಣ ಇಲಾಖೆಯ ಸ್ವಾಮಿ ಗಾಯಕ ಅಮ್ಮ ರಾಮಚಂದ್ರ ಇತರರು ಇದ್ದರು.
ಬಹುಮಾನ ವಿಜೇತರು: ಪಂದ್ಯಾವಳಿಯಲ್ಲಿ ರಾಯಚೂರು ತಂಡ, ಮೈಸೂರು ತಂಡವನ್ನು ಸೋಲಿಸುವ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸಿತು. ಮೈಸೂರು ದ್ವಿತೀಯ ಸ್ಥಾನ, ಚಾಮರಾಜನಗರ ಮತ್ತು ಧಾರವಾಡ ತಂಡಗಳು ಜಂಟಿಯಾಗಿ ಮೂರನೇ ಸ್ಥಾನ ಹಂಚಿಕೊಂಡವು. ಬೆಸ್ಟ್ ಅಟ್ಯಾಕರ್‌ಆಗಿ ಗಗನ್(ಮೈಸೂರು), ಬೆಸ್ಟ್ ಡಿಫೆಂಡರ್ ಆಗಿ ಕಿರಣ್ (ರಾಯಚೂರು), ಬೆಸ್ಟ್ ಆಲ್‌ರೌಂಡರ್ ಆಗಿ ಶಿವಪ್ಪ (ರಾಯಚೂರು) ಪ್ರಶಸ್ತಿ ಪಡೆದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net