ಕಿರು ರಂಗಮಂದಿರದಲ್ಲಿ ‘ಊರ ಸುಟ್ಟರೂ ಹನುಮ್ಮಪ್ಪ ಹೊರಗ’ ನಾಟಕ

‘ಊರ ಸುಟ್ಟರೂ ಹನುಮ್ಮಪ್ಪ ಹೊರಗ’ ನಾಟಕದ ದೃಶ್ಯಾವಳಿ
‘ಊರ ಸುಟ್ಟರೂ ಹನುಮ್ಮಪ್ಪ ಹೊರಗ’ ನಾಟಕದ ದೃಶ್ಯಾವಳಿ
Published on

ಪ್ರಮುಖ ಮುಖ್ಯಾಂಶಗಳು

  • ಮಹಾಜನ ಕಾಲೇಜು ವಿದ್ಯಾರ್ಥಿಗಳಿಂದ ಪ್ರಸ್ತುತ
  • ಕಿರುರಂಗಮಂದಿರದಲ್ಲಿ ಹನುಮಂತ ಹಾಲಿಗೆರೆ ರಚನೆಯ ಸುಮತಿ ಕೆ.ಆರ್. ನಿರ್ದೇಶನದಲ್ಲಿ ವಿದ್ಯಾರ್ಥಿಗಳು ಪ್ರಸ್ತುತಿ
ಮೈಸೂರು: ಸಂಚಲನ ಮೈಸೂರು ದಶಮಾನೋತ್ಸವದ ನಾಟಕೋತ್ಸವದ 4ನೇ ದಿನವಾದ ಮಂಗಳವಾರ ಮಹಾಜನ ಕಾಲೇಜಿನ ಸಾರಂತ ರಂಗ ತಂಡದವರು ‘ಊರ ಸುಟ್ಟರೂ ಹನುಮ್ಮಪ್ಪ ಹೊರಗ’ ನಾಟಕವನ್ನು ಮನೋಜ್ಞವಾಗಿ ಅಭಿನಯಿಸಿದರು. 
ಕಿರುರಂಗಮಂದಿರದಲ್ಲಿ ಹನುಮಂತ ಹಾಲಿಗೆರೆ ರಚನೆಯ ಸುಮತಿ ಕೆ.ಆರ್. ನಿರ್ದೇಶನದಲ್ಲಿ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು.
 ನಾಟಕವು ದೇವರ ಮೇಲೆ ನಂಬಿಕೆ ಮುಖ್ಯ. ಆದರೆ ಮೂಢನಂಬಿಕೆಯಲ್ಲ ಎಂಬುದನ್ನು ಸಾರುತ್ತದೆ. ಹನುಮ ಎಂಬ ದೇವರ ವಿಗ್ರಹದ ಪ್ರತಿಷ್ಠಾಪನೆಗಾಗಿ ಎರಡು ಊರುಗಳ ಮಧ್ಯೆ ನಡೆಯುವ ಜಗಳ, ಕಿತ್ತಾಟಗಳನ್ನು ಕಲಾವಿದರು ಚೆಂದವಾಗಿ ಅಭಿನಯಿಸಿ ತೋರಿಸಿದರು.
ದೇವರ ಮೇಲಿನ ಅತಿಯಾದ ಪ್ರೀತಿ, ಕುರುಡುತನ ಎರಡು ಊರುಗಳ ಮಧ್ಯೆ ಬಿಕ್ಕಟ್ಟನ್ನು ಸೃಷ್ಟಿಸುವುದಲ್ಲದೆ, ಅದು ನ್ಯಾಯಾಲಯದ ಮೆಟ್ಟಿಲನ್ನು ಸಹ ಏರುತ್ತದೆ. ಕೊನೆಗೆ ಹೇಗಾದರೂ ಮಾಡಿ ದೇವರ ವಿಗ್ರಹ ಪಡೆದುಕೊಳ್ಳಬೇಕು ಎಂದು ಹಠಕ್ಕೆ ಬಿದ್ದ ಊರಿನ ಜನರು 15 ವರ್ಷದ ನ್ಯಾಯಾಂಗ ಹೋರಾಟ ಮಾಡಿ ಕೊನೆಗೆ ತಮ್ಮ ಎಲ್ಲ ಆಸ್ತಿಯನ್ನು ಮಾರಿ ಊರನ್ನು ಬಿಟ್ಟು ಹೋಗುತ್ತಾರೆ. 
ಅಂತಿಮವಾಗಿ ಯಾವ ದೇವರಿಗಾಗಿ ಅವರು ಹೋರಾಟ ಮಾಡಿದ್ದರೊ ಅದೇ ದೇವರ ವಿಗ್ರಹ ತೆಗೆದುಕೊಂಡು ಹೋಗಿ ಎಂದು ಊರಿನವರಿಗೆ ಹೇಳಿದಾಗ ನಮ್ಮ ಬದುಕನ್ನು ಕಿತ್ತುಕೊಂಡ ಈ ವಿಗ್ರಹ ನಮಗೆ ಬೇಡ ಎಂದು ತಿರಸ್ಕರಿಸುವುದರೊಂದಿಗೆ ನಾಟಕ ಅಂತ್ಯಗೊಳ್ಳುತ್ತದೆ.
"

ಊರ ಸುಟ್ಟರೂ ಹನುಮ್ಮಪ್ಪ ಹೊರಗ ನಾಟಕ ಮನಸ್ಸುಗಳನ್ನು ಒಂದು ಮಾಡುತ್ತದೆ. ಜಗತ್ತು ಮೊಬೈಲ್ ಹಿಂದೆ ಬಿದ್ದಿದೆ. ಪರಿವರ್ತನೆಗೆ ನಾಟಕಗಳು ಸಹಕಾರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net