ಮುಖ್ಯ ಕಸುಬಾಗುತ್ತಿರುವ ರೇಷ್ಮೆ ಬೇಸಾಯ

ರೇಷ್ಮೆ ಕೃಷಿ ವಿಜ್ಞಾನ ಅಧ್ಯಯನ ವಿಭಾಗದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಪ್ರೊ.ಎನ್.ಕೆ.ಲೋಕನಾಥ್, ಪ್ರೊ.ಎಸ್.ಆರ್.ನಿರಂಜನ, ಪ್ರೊ.ಬಿ.ಸಣ್ಣಪ್ಪ, ಪ್ರೊ.ಎಂ.ಎನ್.ಅನಿಲ್‌ಕುಮಾರ್ ಇದ್ದರು.
ರೇಷ್ಮೆ ಕೃಷಿ ವಿಜ್ಞಾನ ಅಧ್ಯಯನ ವಿಭಾಗದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಪ್ರೊ.ಎನ್.ಕೆ.ಲೋಕನಾಥ್, ಪ್ರೊ.ಎಸ್.ಆರ್.ನಿರಂಜನ, ಪ್ರೊ.ಬಿ.ಸಣ್ಣಪ್ಪ, ಪ್ರೊ.ಎಂ.ಎನ್.ಅನಿಲ್‌ಕುಮಾರ್ ಇದ್ದರು.
Published on
ಮೈಸೂರು: ಉಪಕಸುಬಾಗಿದ್ದ ರೇಷ್ಮೆ ಕೃಷಿಯು ಇತ್ತೀಚೆಗೆ ಮುಖ್ಯ ಕಸುಬಾಗಿ ಪರಿವರ್ತನೆಗುತ್ತಿದೆಯಲ್ಲದೆ, ರೇಷ್ಮೆ ವ್ಯವಸಾಯವನ್ನು ದೊಡ್ಡ ಪ್ರಮಾಣದಲ್ಲಿಯೂ ಕೈಗೊಳ್ಳಲು ರೈತರು ಮುಂದೆ ಬರುತ್ತಿದ್ದಾರೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಹೇಳಿದರು.
ಮಾನಸಗಂಗೋತ್ರಿಯ ಮಾಳವಿಯ ಮಿಷನ್ ಶಿಕ್ಷಕರ ತರಬೇತಿ ಕೇಂದ್ರದ ಸಹಯೋಗದಲ್ಲಿ ರೇಷ್ಮೆ ಕೃಷಿ ವಿಜ್ಞಾನ ಅಧ್ಯಯನ ವಿಭಾಗದಲ್ಲಿ ಶನಿವಾರ ಆಯೋಜಿಸಿದ್ದ ರೇಷ್ಮೆ ಕೃಷಿ ತಾಂತ್ರಿಕತೆಗಳ ಕುರಿತು ರಾಷ್ಟ್ರೀಯ ಪ್ರಾಯೋಗಿಕ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ, ರೇಷ್ಮೆ ಕೃಷಿಯು ಆದಾಯ ಕೊಡುವ ಮುಖ್ಯ ಉದ್ಯಮವಾಗಿದೆ. ಅಲ್ಲದೆ ಕುಟುಂಬದವರು ಒಟ್ಟಾಗಿ ಉದ್ಯೋಗ ಮಾಡಬಹುದು ಎಂದು ಹೇಳಿದರು.
ಗ್ರಾಮೀಣ ಉದ್ಯೋಗ ಸೃಷ್ಟಿ ಮತ್ತು ಅಂತರ್ಗತ ಅಭಿವೃದ್ಧಿಗೆ ರೇಷ್ಮೆ ಕೃಷಿಯಿಂದ ಸುಲಭವಾಗಿ ಸಾಧ್ಯವಾಗುತ್ತದೆ. ಅಲ್ಲದೆ, ಮಹತ್ವದ ಗ್ರಾಮೀಣ ಪರಿವರ್ತನೆ ಕ್ಷೇತ್ರವಾಗಿದೆ. ರೇಷ್ಮೆ ಕೃಷಿಗೆ ಸಂಬಂಧಪಟ್ಟ ವಿಷಯಗಳನ್ನು ರೇಷ್ಮೆ ಕೃಷಿ ತಜ್ಞರು ಮಂಡಿಸಲಿದ್ದು, ಒಟ್ಟಾರೆ ಹಿಪ್ಪುನೇರಳೆ, ಗೂಡಿನ ಗುಣಮಟ್ಟ ಹಾಗೂ ಉತ್ಪಾದನೆ ಮತ್ತು ಉತ್ಪಾದಕತೆಯನ್ನು ರೈತರಲ್ಲಿ ಹೆಚ್ಚಿಸಲು ಸಹಕಾರಿಯಾಗುತ್ತದೆ ಎಂದರು.
ರೇಷ್ಮೆ ಕೃಷಿಯು ಗ್ರಾಮಾಂತರ ಪ್ರದೇಶಗಳ ಬಡತನವನ್ನು ನಿರ್ಮೂಲಗೊಳಿಸಿ, ಸಾಮಾಜಿಕ ಮತ್ತು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಹಕಾರಿಯಾಗಿದೆ. ರೇಷ್ಮೆ ಉತ್ಪಾದನೆಯಲ್ಲಿ ಭಾರತವು ಪ್ರಪಂಚದಲ್ಲಿ ಎರಡನೆಯ ಸ್ಥಾನದಲ್ಲಿದ್ದು, 2024-25ರ ಆರ್ಥಿಕ ವರ್ಷದಲ್ಲಿ 41,121 ಮೆಟ್ರಿಕ್‌ನಷ್ಟು ಉತ್ಪಾದನೆಯಾಗಿದೆ. ಇದರಲ್ಲಿ ಹಿಪ್ಪುನೇರಳೆ ರೇಷ್ಮೆಯು ಶೇ. 75ರಷ್ಟು ಮತ್ತು ಹಿಪ್ಪುನೇರಳೇತರ ರೇಷ್ಮೆಯು ಶೇ. 25ರಷ್ಟು ಪಾಲಿರುತ್ತದೆ. ರೇಷ್ಮೆ ಕೃಷಿಯು ರೇಷ್ಮೆ ಹುಳು ಸಾಕಣೆ, ಹಿಪ್ಪುನೇರಳೆ ಬೇಸಾಯ ಹಾಗೂ ಕಚ್ಛಾ ರೇಷ್ಮೆ ಉತ್ಪಾದನೆಗಾಗಿ ನೂಲು ಬಿಚ್ಚಾಣಿಕೆಗಳನ್ನು ಒಳಗೊಂಡಿದ್ದು, ರಾಜ್ಯದಲ್ಲಿ 250 ವರ್ಷಗಳ ಹಿಂದಿನಿಂದಲೂ ಪ್ರಚಲಿತವಾಗಿದೆ. ಈ ಉದ್ಯಮವು ಕೃಷಿ ಮೂಲದ, ಕಾರ್ಮಿಕ ಪ್ರಧಾನ ಹಾಗೂ ಆರ್ಥಿಕ ಸಬಲೀಕರಣಕ್ಕೆ ಪ್ರಮುಖ ಗುಡಿ ಕೈಗಾರಿಕೆಯಾಗಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ.ಎಸ್.ಆರ್.ನಿರಂಜನ, ರೇಷ್ಮೆ ಕೃಷಿ ವಿಜ್ಞಾನ ಅಧ್ಯಯನ ವಿಭಾಗ ಅಧ್ಯಕ್ಷ ಪ್ರೊ.ಬಿ.ಸಣ್ಣಪ್ಪ, ಸಂಘಟನಾ ಕಾರ್ಯದರ್ಶಿ ಪ್ರೊ.ಎಂ.ಎನ್.ಅನಿಲ್‌ಕುಮಾರ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net