ದಲಿತರಿಗೆ ಅರಮನೆಗೆ ಪ್ರವೇಶ ನೀಡಿದ್ದ ನಾಲ್ವಡಿ

ರಂಗಾಯಣದ ಶ್ರೀರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಣ್ಯರು ನಾಲ್ವಡಿ ಕೃಷ್ಣರಾಜ ಒಡೆಯರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಪ್ರೊ.ಪಿ.ವಿ. ನಂಜರಾಜ ಅರಸು, ಸ್ಟ್ಯಾನ್ಲಿ, ಶಿವಪ್ರಸಾದ್, ಸೋಸಲೆ ಸಿದ್ದರಾಜು, ಜಮೀರ್ ಅಹಮದ್, ದ್ಯಾವಪ್ಪನಾಯಕ ಇತರರಿದ್ದರು.
ರಂಗಾಯಣದ ಶ್ರೀರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಣ್ಯರು ನಾಲ್ವಡಿ ಕೃಷ್ಣರಾಜ ಒಡೆಯರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಪ್ರೊ.ಪಿ.ವಿ. ನಂಜರಾಜ ಅರಸು, ಸ್ಟ್ಯಾನ್ಲಿ, ಶಿವಪ್ರಸಾದ್, ಸೋಸಲೆ ಸಿದ್ದರಾಜು, ಜಮೀರ್ ಅಹಮದ್, ದ್ಯಾವಪ್ಪನಾಯಕ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಇತಿಹಾಸ ತಜ್ಞ ಪ್ರೊ.ಪಿ.ವಿ.ನಂಜರಾಜ ಅರಸು ಮಾಹಿತಿ
  • ಚಾರ್ವಾಕ ಸಂಸ್ಥೆಯಿಂದ ವಿಚಾರ ಸಂಕಿರಣ
ದಲಿತರನ್ನು ಇಂದಿಗೂ ಮನೆಯೊಳಗೆ ಸೇರಿಸದ ಮನಸ್ಥಿತಿ ಇದೆ. ಆದರೆ ನಾಲ್ವಡಿ 1936ರಲ್ಲೇ ದಲಿತರಿಗೆ ದಸರಾ, ಅರಮನೆಗೆ ಪ್ರವೇಶ ನೀಡಿದ್ದರು ಎಂದು ಇತಿಹಾಸ ತಜ್ಞ ಪ್ರೊ.ಪಿ.ವಿ. ನಂಜರಾಜ ಅರಸು ಅಭಿಪ್ರಾಯಪಟ್ಟರು.
ಚಾರ್ವಾಕ ಸಂಸ್ಥೆ ವತಿಯಿಂದ ರಂಗಾಯಣದ ಶ್ರೀರಂಗಮಂದಿರದಲ್ಲಿ ನಾಲ್ವಡಿ ಕೃಷ್ಣರಾಜ ಜಯಂತಿ ಅಂಗವಾಗಿ ಭಾನುವಾರ ಆಯೋಜಿಸಿದ್ದ ಅಹಿಂದ ಚಳವಳಿಯ ಹರಿಕಾರ, ರಾಜ ಋಷಿ ನಾಲ್ವಡಿ ಕೃಷ್ಣರಾಜ ಒಡೆಯರು ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಜಾತಿ, ಮೇಲು-ಕೀಳು ಎಂದು ನೋಡದೆ ಸಮಾನ ಅಂತಸ್ತು, ಅವಕಾಶಗಳನ್ನು ಪ್ರತಿಯೊಬ್ಬರಿಗೂ ನೀಡಬೇಕು ಎಂಬುದು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಶಯವಾಗಿತ್ತು ಎಂದರು.
ಒಡನಾಡಿ ಸಂಸ್ಥೆ ಮುಖ್ಯಸ್ಥ ಸ್ಟ್ಯಾನ್ಲಿ ಮಾತನಾಡಿ, ರಾಜಪೋಷಕು ಇಲ್ಲದ ಜನಸೇವಕ ನಾಲ್ವಡಿ. ಚಾಮರಾಜೇಂದ್ರ ಒಡೆಯರ್, ಕೆಂಪನಂಜಮ್ಮಣ್ಣಿ ಅವರಿಂದಲೇ ನಾಲ್ವಡಿಯರಿಗೆ ಎಲ್ಲ ರೀತಿಯ ಸಂಸ್ಕಾರ ಬಂದಿತು. ಸಮರ್ಥ ಆಡಳಿಗಾರನ್ನಾಗಿ ರೂಪಿಸಿದ್ದು ಕೆಂಪನಂಜಮ್ಮಣ್ಣಿಯವರು. ನನ್ನ ನಂಬಿರುವ ಬಡಜನರು ಉದ್ಧಾರ ಆಗಬೇಕೆಂಬುದು ನಾಲ್ವಡಿಯರು ಕನಸು ಮತ್ತು ಗುರಿಯಾಗಿತ್ತು ಎಂದರು.
ದೇವರತ್ನ ಫೌಂಡೇಷನ್ ಮುಖ್ಯಸ್ಥ ಶಿವಪ್ರಸಾದ್, ಪ್ರಜ್ಞಾ ಟ್ರಸ್ಟ್‌ನ ಸೋಸಲೆ ಸಿದ್ದರಾಜು, ಸಾಮಾಜಿಕ ಹೋರಾಟಗಾರ ಅಹಿಂದ ಜವರಪ್ಪ, ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಉತ್ತನಹಳ್ಳಿ ಶಿವಣ್ಣ, ಗ್ರಾಮಾಂತರ ಕಾಂಗ್ರೆಸ್ ಸಮಿತಿ ಹಿರಿಯ ಕಾರ್ಯದರ್ಶಿ ಜಮೀರ್ ಅಹಮದ್, ಮಾನವ ಬಂಧುತ್ವ ವೇದಿಕೆ ವಿಭಾಗೀಯ ಸಂಚಾಲಕ ದ್ಯಾವಪ್ಪನಾಯಕ, ಚಾರ್ವಾಕ ಸಂಸ್ಥೆ ಅಧ್ಯಕ್ಷ ಗಿರೀಶ್ ಮಾಚಹಳ್ಳಿ, ಪತ್ರಕರ್ತ ಕೆ.ದೀಪಕ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net