ಅಭಿವೃದ್ಧಿ ಹಾಗೂ ನವೀಕರಣ ಕಾಮಗಾರಿಗಳ ಹಿನ್ನೆಲೆಯಲ್ಲಿ ಈ ಕ್ರಮ
ಬೋನ್ಸಾಯ್ ಉದ್ಯಾನ ಮತ್ತು ವಿಶ್ವಂ ವಸ್ತು ಸಂಗ್ರಹಾಲಯಗಳು ಎಂದಿನಂತೆ ಕಾರ್ಯನಿರ್ವಹಣೆ
ಮೈಸೂರು: ನಗರದ ಅವಧೂತ ದತ್ತ ಪೀಠದ ಗಿಳಿಗಳ ಪುನರ್ವಸತಿ ಕೇಂದ್ರ ಶುಕವನವು ಜೂನ್ 1ರಿಂದ ಮುಂದಿನ ಸೂಚನೆಯವರೆಗೆ ತಾತ್ಕಾಲಿಕವಾಗಿ ಮುಚ್ಚಲಾಗುತ್ತಿದೆ.
ಅಭಿವೃದ್ಧಿ ಹಾಗೂ ನವೀಕರಣ ಕಾಮಗಾರಿಗಳ ಹಿನ್ನೆಲೆಯಲ್ಲಿ ಶುಕವನಕ್ಕೆ ಸಾರ್ವಜನಿಕರ ಪ್ರವೇಶವನ್ನು ಸದ್ಯಕ್ಕೆ ನಿರ್ಭಂಧಿಸಲಾಗುತ್ತಿದೆ ಎಂದು ದತ್ತ ಪೀಠದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಅಭಿವೃದ್ಧಿ ಕೆಲಸಗಳಿಗಾಗಿ ಶುಕವನವನ್ನು ಮಾತ್ರ ತಾತ್ಕಾಲಿಕವಾಗಿ ಮುಚ್ಚಲಾಗುತ್ತಿದ್ದು, ಇದರಿಂದ ವೀಕ್ಷಕರಿಗೆ ಉಂಟಾಗುವ ಅನನುಕೂಲತೆಗೆ ವಿಷಾದಿಸುತ್ತೇವೆ. ಸಾರ್ವಜನಿಕರು ಮತ್ತು ಭಕ್ತಾದಿಗಳು ಎಂದಿನಂತೆ ತಮ್ಮ ಸಹಕಾರ ನೀಡಬೇಕು ಎಂದೂ ಕೋರಲಾಗಿದೆ.
ಬೋನ್ಸಾಯ್ ಉದ್ಯಾನವನ ಮುಕ್ತ
ಶುಕವನ ಮುಚ್ಚಲ್ಪಟ್ಟಿದ್ದರೂ, ಅದಕ್ಕೆ ಹೊಂದಿಕೊಂಡಂತಿರುವ ವಿಶ್ವವಿಖ್ಯಾತ ಬೋನ್ಸಾಯ್ ಉದ್ಯಾನ ಮತ್ತು ವಿಶ್ವಂ ವಸ್ತು ಸಂಗ್ರಹಾಲಯಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.
ಪ್ರವಾಸಿಗರು ಮತ್ತು ಸಾರ್ವಜನಿಕರು ಎಂದಿನಂತೆ ಈ ಎರಡು ಸ್ಥಳಗಳಿಗೆ ಭೇಟಿ ನೀಡಬಹುದಾಗಿದೆ.