ವಿದ್ಯಾರ್ಥಿಗಳು ಪಾಲಕರ ಕನಸನ್ನು ಸಾಕಾರಗೊಳಿಸಿ

ತಿ.ನರಸೀಪುರ ತಾಲೂಕಿನ ಸೋಮನಾಥಪುರ ಗ್ರಾಮದ ಬಳಿಯಿರುವ ಆರೋಹಣ ಸೆಂಟ್ರಲ್ ಸ್ಕೂಲ್‌ನಲ್ಲಿ ಶುಕ್ರವಾರ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಹಾಗೂ ಸರಸ್ವತಿ ಪೂಜೆ ಆಯೋಜಿಸಲಾಗಿತ್ತು. ವೈ.ಎಚ್.ಹನುಮಂತೇಗೌಡ, ಎನ್.ಎಂ.ರಾಮಚಂದ್ರ, ಬಿ.ಎಸ್.ಯೋಗೇಂದ್ರ,  ಮಾಣಕ್‌ಚಂದ್ ಇತರರು ಇದ್ದರು.
ತಿ.ನರಸೀಪುರ ತಾಲೂಕಿನ ಸೋಮನಾಥಪುರ ಗ್ರಾಮದ ಬಳಿಯಿರುವ ಆರೋಹಣ ಸೆಂಟ್ರಲ್ ಸ್ಕೂಲ್‌ನಲ್ಲಿ ಶುಕ್ರವಾರ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಹಾಗೂ ಸರಸ್ವತಿ ಪೂಜೆ ಆಯೋಜಿಸಲಾಗಿತ್ತು. ವೈ.ಎಚ್.ಹನುಮಂತೇಗೌಡ, ಎನ್.ಎಂ.ರಾಮಚಂದ್ರ, ಬಿ.ಎಸ್.ಯೋಗೇಂದ್ರ, ಮಾಣಕ್‌ಚಂದ್ ಇತರರು ಇದ್ದರು.
Published on

ಆರೋಹಣ ಸೆಂಟ್ರಲ್ ಸ್ಕೂಲ್ ಕಾರ್ಯದರ್ಶಿ ಎನ್.ಎಂ.ರಾಮಚಂದ್ರ ಕರೆ

ತಿ.ನರಸೀಪುರ: ಪಾಲಕರು ತಮ್ಮ ಮಕ್ಕಳ ಭವಿಷ್ಯದ ಮೇಲೆ ಹೆಚ್ಚಿನ ಭರವಸೆಯನ್ನು ಇಟ್ಟುಕೊಂಡು ಉನ್ನತ ಶಿಕ್ಷಣ ಕೊಡಿಸುತ್ತಾರೆ. ಶಿಕ್ಷಣ ಪಡೆದ ಭವಿಷ್ಯ ರೂಪಿಸಿಕೊಳ್ಳುವ ಮೂಲಕ ಪ್ರತಿಯೊಬ್ಬ ಮಕ್ಕಳು ಪಾಲಕರ ಕನಸನ್ನು ಸಾಕಾರಗೊಳಿಸಬೇಕು ಎಂದು ಆರೋಹಣ ಸೆಂಟ್ರಲ್ ಸ್ಕೂಲ್ ನ ಕಾರ್ಯದರ್ಶಿ ಎನ್.ಎಂ.ರಾಮಚಂದ್ರ ಕರೆ ನೀಡಿದರು.
ತಾಲೂಕಿನ ಸೋಮನಾಥಪುರ (ಕುಳ್ಳನಕೊಪ್ಪಲು)ಗ್ರಾಮದ ಬಳಿಯಿರುವ ಆರೋಹಣ ಸೆಂಟ್ರಲ್ ಸ್ಕೂಲ್‌ನಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಹಾಗೂ ಸರಸ್ವತಿ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ವರ್ಷವಿಡೀ ಕಲಿತು ಪರೀಕ್ಷೆ ಬರೆಯುವ ವೇಳೆ ಜ್ಞಾಪಕ ಶಕ್ತಿ ಹೆಚ್ಚಾಗಲಿ ಎಂಬ ಉದ್ದೇಶದಿಂದ ಸರಸ್ವತಿ ಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ವಿದ್ಯಾರ್ಥಿಗಳು ದೇವರ ಪೂಜೆಯೊಂದಿಗೆ ಕಠಿಣ ವಿದ್ಯಾಬ್ಯಾಸದಲ್ಲಿ ತೊಡಗಿಕೊಳ್ಳುವ ಮೂಲಕ ಉತ್ತಮ ಅಂಕ ಗಳಿಸಿ ಪಾಲಕರ ಶ್ರಮಕ್ಕೆ ಪ್ರತಿಫಲ ನೀಡುವ ಕೆಲಸ ಮಾಡಬೇಕಿದೆ. ವಿದ್ಯಾರ್ಥಿಗಳು ನೈತಿಕ ಮೌಲ್ಯಗಳನ್ನು ರೂಢಿಸಿಕೊಂಡು ವಿದ್ಯಾರ್ಜನೆಯಲ್ಲಿ ಸಾಧನೆ ಮಾಡಿದರೆ, ನಿಮ್ಮ ಜೀವನ ಉತ್ತಮವಾಗುತ್ತದೆ. ನಿರುದ್ಯೋಗ ಎಂದು ಭಯ ಬೀಳುವ ಅಗತ್ಯವಿಲ್ಲ. ಅಧ್ಯಯನ ಮಾಡಿ ನೀವು ಸಾಮರ್ಥ್ಯ ಗಳಿಸಿಕೊಂಡರೆ ದೇಶ-ವಿದೇಶಗಳಲ್ಲಿ ಅವಕಾಶ ಖಂಡಿತ ಸಿಗುತ್ತದೆ ಎಂದು ಎನ್.ಎಂ.ರಾಮಚಂದ್ರ ತಿಳಿಸಿದರು.
ಶಾಲೆಯ ಅಧ್ಯಕ್ಷ ವೈ.ಎಚ್.ಹನುಂತೇಗೌಡ ಮಾತನಾಡಿ, ದೇಶ ಬುದ್ಧಿವಂತ ಮಾನವ ಸಂಪನ್ಮೂಲವನ್ನು ಹೊಂದಿದೆ. ನಮ್ಮ ಪೂರ್ವಿಕರ ಕೊಡುಗೆ ಅತ್ಯಂತ ಮಹತ್ವದ್ದು. ಅನೇಕ ಮಹನೀಯರು ತಂತ್ರಜ್ಞಾನಕ್ಕೆ ಶ್ರೇಷ್ಠ ಕೊಡುಗೆ ನೀಡಿದ್ದಾರೆ. ಹಾಗೆ ವಿದ್ಯಾರ್ಥಿಗಳಾದ ನೀವು ನಿಮ್ಮ ಬುದ್ಧಿವಂತಿಕೆಯನ್ನು ದೇಶಕ್ಕೆ ಮುಡಿಪಾಗಿರಿಸಿ. ಯಾವ ಕಾರಣಕ್ಕೂ ನಿಮ್ಮಲ್ಲಿ ಕೀಳರಿಮೆ ಇರಬಾರದು. ಉತ್ತಮ ಪ್ರಜೆಗಳಾಗಬೇಕಾದರೆ ನೀವು ಉತ್ತಮ ವಿದ್ಯಾರ್ಥಿಗಳಾಗಿ ಸಾಧನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಗೌರವ ಕಾರ್ಯದರ್ಶಿ ಬಿ.ಎಸ್.ಯೋಗೇಂದ್ರ, ಖಜಾಂಚಿ ಮಾಣಕ್ ಚಂದ್, ಪ್ರಾಂಶುಪಾಲರಾದ ಬಿ.ವಿಮಲಾ, ಮುಖ್ಯಶಿಕ್ಷಕಿ ಬಿ.ಆರ್.ಲಕ್ಷ್ಮೀ ಸೇರಿದಂತೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net