ಸಾರ್ವಜನಿಕರ ಅಹವಾಲು ಸ್ಪೀಕರಿಸಿದ ಶ್ರೀವತ್ಸ

ಸುಣ್ಣದಕೇರಿ ವ್ಯಾಪ್ತಿಯಲ್ಲಿ ಗುರುವಾರ ಶಾಸಕ ಟಿ.ಎಸ್.ಶ್ರೀವತ್ಸ ಸಾರ್ವಜನಿಕರ ಅಹವಾಲು ಸ್ಪೀಕರಿಸಿದರು. ಶಿವಕುಮಾರ್, ಮಂಜು, ನಂದೀಶ್ ನಾಯಕ್, ಕೃಷ್ಣ ನಾಯಕ್, ಜೋಗಪ್ಪ ಇತರರಿದ್ದರು.
ಸುಣ್ಣದಕೇರಿ ವ್ಯಾಪ್ತಿಯಲ್ಲಿ ಗುರುವಾರ ಶಾಸಕ ಟಿ.ಎಸ್.ಶ್ರೀವತ್ಸ ಸಾರ್ವಜನಿಕರ ಅಹವಾಲು ಸ್ಪೀಕರಿಸಿದರು. ಶಿವಕುಮಾರ್, ಮಂಜು, ನಂದೀಶ್ ನಾಯಕ್, ಕೃಷ್ಣ ನಾಯಕ್, ಜೋಗಪ್ಪ ಇತರರಿದ್ದರು.
Published on
ಮೈಸೂರು: ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸುಣ್ಣದಕೇರಿ(ವಾರ್ಡ್ ನಂ.50) ವ್ಯಾಪ್ತಿಯಲ್ಲಿ ಗುರುವಾರ ಶಾಸಕ ಟಿ.ಎಸ್.ಶ್ರೀವತ್ಸ ಪಾದಯಾತ್ರೆ ಮಾಡುವ ಮೂಲಕ ಸಾರ್ವಜನಿಕರ ಅಹವಾಲು ಸ್ಪೀಕರಿಸಿದರು.
ನಗರಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಪಾದಯಾತ್ರೆ ನಡೆಸಿದ ಶಾಸಕರು, ಜನರ ಕುಂದುಕೊರತೆ ಆಲಿಸಿದರು.
ಪಾದಯಾತ್ರೆಯಲ್ಲಿ ಅಸ್ವಚ್ಛತೆ, ಯುಜಿಡಿ ಸೇರಿ ನಾನಾ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಿಂದ ದೂರು ಕೇಳಿಬಂದಿತು. ಸಾರ್ವಜನಿಕರ ಅಹವಾಲು ಆಲಿಸಿದ ಶಾಸಕರು, ಅವ್ಯವಸ್ಥೆ ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಯುಜಿಡಿ, ಸ್ವಚ್ಛತೆ ಹಾಗೂ ಒಳಚರಂಡಿ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು. ಸುಣ್ಣದಕೇರಿಯ ಸಮಗ್ರ ಅಭಿವೃದ್ಧಿಗೂ ಸೂಚನೆ ನೀಡಿದರು.
ಮಾಜಿ ಮೇಯರ್ ಶಿವಕುಮಾರ್, ಬಿಜೆಪಿ ವಾರ್ಡ್ ಅಧ್ಯಕ್ಷ ಮಂಜು, ಮುಖಂಡರಾದ ನಂದೀಶ್ ನಾಯಕ್, ಕೃಷ್ಣ ನಾಯಕ್, ಜೋಗಪ್ಪ, ಅರುಣ, ಗಂಗಾಧರ್, ನಾಗೇಶ್, ಗಂಗಾ, ಅನಿಲ್, ಲಿಂಗರಾಜು, ಇಮ್ರಾನ್, ಫಾರೂಕ್, ಹೇಮಂತ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net