ಅಭಿಯಾನದಲ್ಲಿ 60ಕ್ಕೂ ಹೆಚ್ಚು ಸ್ಥಳೀಯ ನಿವಾಸಿಗಳು, ಹಿರಿಯ ನಾಗರಿಕರು, ಮಹಿಳೆಯರು ಹಾಗೂ ಯುವಕರು ಉತ್ಸಾಹದಿಂದ ಭಾಗವಹಿಸಿದ್ದರು. ಬೆಳಗಿನ ಜಾವವೇ ಉದ್ಯಾನದಲ್ಲಿ ಸೇರಿದ್ದ ಸದಸ್ಯರು ಹಲವು ಗಂಟೆಗಳ ಕಾಲ ಸ್ವಯಂಪ್ರೇರಿತವಾಗಿ ಶ್ರಮದಾನ ನಡೆಸಿದರು. ಕಳೆ ಗಿಡಗಳನ್ನು ತೆರವುಗೊಳಿಸುವುದು, ಒಣ ಎಲೆಗಳು ಹಾಗೂ ತ್ಯಾಜ್ಯವನ್ನು ಸಂಗ್ರಹಿಸುವುದು, ಪ್ಲಾಸ್ಟಿಕ್ ಕವರ್‌ಗಳು, ನೀರಿನ ಖಾಲಿ ಬಾಟಲ್‌ಗಳು, ಆಹಾರದ ಪೊಟ್ಟಣದ ತ್ಯಾಜ್ಯ ಹಾಗೂ ಮದ್ಯದ ಖಾಲಿ ಬಾಟಲ್‌ಗಳನ್ನು ತೆರವುಗೊಳಿಸಿದರು. ಅಲ್ಲದೆ ಗಿಡಗಳ ಸುತ್ತಮುತ್ತಲಿನ ಪ್ರದೇಶವನ್ನು ಶುಚಿಗೊಳಿಸಿ ಉದ್ಯಾನದ ಸೌಂದರ್ಯ ಹೆಚ್ಚಿಸುವ ಕೆಲಸವನ್ನೂ ಕೈಗೊಂಡರು.