ಸಮಾಜದ ಸಂಘಟನೆ ಮೊದಲ ಆದ್ಯತೆ

ಹುಣಸೂರು ತಾಲೂಕು ಭೋವಿ ಅಭಿವೃದ್ಧಿ ಟ್ರಸ್ಟ್‌ನ ಪದಾಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷ ವಾಸು, ಗೌರವಾಧ್ಯಕ್ಷ ವಿ.ಗಣೇಶ್ ಭೋವಿ, ಎಚ್.ವಿ.ಪರಮೇಶ್, ವೆಂಕಟಪತಿ, ಶಿಲ್ಪಾ ಇತರರಿದ್ದರು.
ಹುಣಸೂರು ತಾಲೂಕು ಭೋವಿ ಅಭಿವೃದ್ಧಿ ಟ್ರಸ್ಟ್‌ನ ಪದಾಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷ ವಾಸು, ಗೌರವಾಧ್ಯಕ್ಷ ವಿ.ಗಣೇಶ್ ಭೋವಿ, ಎಚ್.ವಿ.ಪರಮೇಶ್, ವೆಂಕಟಪತಿ, ಶಿಲ್ಪಾ ಇತರರಿದ್ದರು.
Published on
ಹುಣಸೂರು: ತಾಲೂಕಿನಲ್ಲಿ ಭೋವಿ ಸಮುದಾಯದ ಸಂಘಟನೆ ಮತ್ತು ಅಭಿವೃದ್ಧಿಗೆ ಮುಂದಡಿ ಇಡಲಾಗಿದೆ ಎಂದು ತಾಲೂಕು ಭೋವಿ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ವಾಸು ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಸಮಾಜದ ಎಲ್ಲರ ನೆರವಿನಿಂದ ಇಂದು ಟ್ರಸ್ಟ್ ಸ್ಥಾಪಿಸಿದ್ದೇವೆ. ಸಮಾಜದ ಸಂಘಟನೆ ಮೊದಲ ಆದ್ಯತೆಯಾಗಿದೆ. ನಂತರದಲ್ಲಿ ಸಮುದಾಯ ಭವನ ನಿರ್ಮಾಣ ಸೇರಿದಂತೆ ಸಮಾಜದ ಸಮಗ್ರ ಅಭಿವೃದ್ಧಿಗೆ ಶ್ರಮವಹಿಸಲಾಗುವುದು. ನಾವೆಲ್ಲರೂ ಸಂಘಟಿತರಾಗಿ ಹೋರಾಡಿದಾಗ ಮಾತ್ರ ರಾಜಕೀಯ ಪಕ್ಷಗಳು ನಮ್ಮನ್ನು ಪರಿಗಣಿಸುತ್ತವೆ. ಇಷ್ಟುಕಾಲ ನಾವು ಕೇವಲ ಮತಬ್ಯಾಂಕ್ ಮಾತ್ರ ಆಗಿದ್ದೆವು .ಇನ್ನು ಮುಂದೆ ಸಮುದಾಯದ ಆಬಿವೃದ್ಧಿಗೆ ಸಹಕಾರ ನೀಡುವವರಿಗೆ ನಾವು ಸಹಕಾರ ನೀಡೋಣ ಎಂದು ಹೇಳಿದರು.
ಗೌರವಾಧ್ಯಕ್ಷ ವಿ.ಗಣೇಶ್ ಭೋವಿ ಮಾತನಾಡಿ, ಸಮುದಾಯದವರು ವಾಸಿಸುವ ಎಲ್ಲ ಗ್ರಾಮಗಳಿಗೆ ಭೇಟಿ ನೀಡಿ. ಪ್ರತಿ ಮನೆಯಲ್ಲೂ ಭೋವಿ ಸಮಾಜ ಟ್ರಸ್ಟ್ ವತಿಯಿಂದ ಸದಸ್ಯತ್ವ ನೋಂದಣಿ ಮಾಡಿಸಲು ಮುಂದಾಗುತ್ತೇವೆ ಎಂದರು.
ಟ್ರಸ್ಟ್ ಕಾರ್ಯಾಧ್ಯಕ್ಷ ಎಚ್.ವಿ.ಪರಮೇಶ ಮಾತನಾಡಿ, ಯುವಕರು ಹಾಗೂ ಸಮಾಜದ ಹಿರಿಯರ ಸಹಕಾರದಿಂದ ಸಮುದಾಯದ ಶಿಕ್ಷಣ, ಆರೋಗ್ಯ, ಅಭಿವೃದ್ಧಿ ವಿಷಯದಲ್ಲಿ ಟ್ರಸ್ಟ್ ಹೆಚ್ಚಿನ ಗಮನಹರಿಸಲಿದೆ ಎಂದರು.
ಪದಾಧಿಕಾರಿಗಳಾದ ವೆಂಕಟಪತಿ, ಮೋಹನ್, ಕುಚೇಲ, ಸ್ವಾಮಿ ಭೋವಿ, ಸುನಿಲ್, ಶಿವಕುಮಾರ್, ಅಶೋಕ, ಹನುಮಂತಪುರ ಸ್ವಾಮಿ, ತಟ್ಟೆಕೆರೆ ಶ್ರೀನಿವಾಸ್, ಆಂಜನೇಯ, ಮೋಹನ್‌ಕುಮಾರ್, ಶಿಲ್ಪಾ ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net