ಹೊಗೆಸೊಪ್ಪು ಬ್ಯಾರನ್ ಬೆಂಕಿಗಾಹುತಿ

 ದೊಡ್ಡಹೆಜ್ಜೂರು ಗ್ರಾಮದ ರೈತ ಸಣ್ಣೇಗೌಡ ಅವರ ತಂಬಾಕು ಹದ ಮಾಡುವ ಬ್ಯಾರನ್‌ಗೆ ಬೆಂಕಿ ತಗುಲಿ ಸುಟ್ಟು ಹಾನಿಯಾಗಿರುವುದು.
ದೊಡ್ಡಹೆಜ್ಜೂರು ಗ್ರಾಮದ ರೈತ ಸಣ್ಣೇಗೌಡ ಅವರ ತಂಬಾಕು ಹದ ಮಾಡುವ ಬ್ಯಾರನ್‌ಗೆ ಬೆಂಕಿ ತಗುಲಿ ಸುಟ್ಟು ಹಾನಿಯಾಗಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ತಂಬಾಕು ಹದ ಮಾಡುವ ವೇಳೆ ಅವಘಡ
ಹನಗೋಡು: ಹೋಬಳಿಯ ದೊಡ್ಡಹೆಜ್ಜೂರು ಗ್ರಾಮದಲ್ಲಿ ಸೋಮವಾರ ಸಂಜೆ ತಂಬಾಕು ಹದ ಮಾಡುವ ವೇಳೆ ಬ್ಯಾರನ್‌ಗೆ ಬೆಂಕಿ ತಗುಲಿ, ಹದಗೊಳಿಸುತ್ತಿದ್ದ ಹೊಗೆಸೊಪ್ಪು ಹಾಗೂ ಬ್ಯಾರನ್ ಸಂಪೂರ್ಣ ಸುಟ್ಟು ಹೋಗಿದೆ.
ಗ್ರಾಮದ ರೈತ ಸಣ್ಣೇಗೌಡ ಅವರ 16 16 ಅಳತೆಯ ಡಬಲ್ ಬ್ಯಾರನ್‌ನಲ್ಲಿ ತಂಬಾಕು ಎಲೆಗಳನ್ನು ಹದ ಮಾಡಲಾಗುತ್ತಿತ್ತು. ಈ ವೇಳೆ ಏಕಾಏಕಿ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲೇ ಬ್ಯಾರನ್‌ಗೆ ವ್ಯಾಪಿಸಿತು. ಬೆಂಕಿಯಿಂದ ದಟ್ಟ ಹೊಗೆ ಆವರಿಸಿದ ಪರಿಣಾಮ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು.
ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಧಾವಿಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟರಾದರೂ, ಅಷ್ಟರಲ್ಲೇ ಬ್ಯಾರನ್‌ನಲ್ಲಿದ್ದ ತಂಬಾಕು ಹಾಗೂ ಬ್ಯಾರನ್ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿತ್ತು. ಈ ಅವಘಡದಿಂದ ಸುಮಾರು 2 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net