ಶಿಕ್ಷಕರಿಗೆ ಸ್ಮಾರ್ಟ್‌ಬೋರ್ಡ್, ಕಂಪ್ಯೂಟರ್ ತರಬೇತಿ

ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಿಂದ ಆಯೋಜಿಸಿದ್ದ ತರಬೇತಿಯಲ್ಲಿ ಭಾಗವಹಿಸಿದ್ದವರಿಗೆ ಪ್ರಮಾಣಪತ್ರ ವಿತರಿಸಲಾಯಿತು. ಎಚ್.ಎಸ್. ಗಿರಿಜಾಂಬಾ, ಡಾ. ಟಿ.ಎಸ್. ಮಂಜುನಾಥ್, ಮಧುಸೂಧನ್, ಸಂಪನ್ಮೂಲ ವ್ಯಕ್ತಿಗಳಾದ ಡಾ. ಜಯರಾಂ, ಡಾ. ಹರ್ಷಕುಮಾರ್, ಪ್ರೊ. ಅರುಣ್ ಕುಮಾರ್  ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಶಾಲೆಗೆ ಸ್ಮಾರ್ಟ್‌ಬೋರ್ಡ್‌ಗಳು ಬೇಕು
  • ಮುಂದಿನ ದಿನಗಳಲ್ಲಿ ಒಂದು ವಾರದ ತರಬೇತಿ ನೀಡಲಾಗುವುದು
ಮೈಸೂರು:ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ವಾಲ್ಮೀಕಿ ಆಶ್ರಮ ಶಾಲೆಯ ಶಿಕ್ಷಕರಿಗೆ ಸ್ಮಾರ್ಟ್‌ಬೋರ್ಡ್ ಹಾಗೂ ಕಂಪ್ಯೂಟರ್ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ನಗರದಲ್ಲಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಉಪ ನಿರ್ದೇಶಕಿ ಎಚ್.ಎಸ್. ಗಿರಿಜಾಂಬಾ, ಮೈಸೂರು ಕೊಡಗು, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ 93 ಶಿಕ್ಷಕರು ತರಬೇತಿಯಲ್ಲಿ ಭಾಗವಹಿಸಿದ್ದರು. ಶಾಲೆಗೆ ಸ್ಮಾರ್ಟ್‌ಬೋರ್ಡ್‌ಗಳು ಬೇಕು. ತರಬೇತಿಗಳು ಮುಗಿದ ನಂತರ ಅನುಸರಣೆ ಮಾಡಬೇಕು ಎನ್ನುವ ಅಭಿಪ್ರಾಯ ಶಿಬಿರಾರ್ಥಿಗಳಿಂದ ವ್ಯಕ್ತವಾಗಿದ್ದು, ಇದನ್ನು ಸರ್ಕಾರದ ಗಮನಕ್ಕೆ ತಂದು ಅನುಮತಿ ಪಡೆದು ಮುಂದಿನ ದಿನಗಳಲ್ಲಿ ಒಂದು ವಾರದ ತರಬೇತಿ ನೀಡಲಾಗುವುದು ಎಂದರು.
ಮೈಸೆಮ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಟಿ.ಎಸ್. ಮಂಜುನಾಥ್ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿದರು. ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಮಧುಸೂಧನ್, ಸಂಪನ್ಮೂಲ ವ್ಯಕ್ತಿಗಳಾದ ಡಾ. ಜಯರಾಂ, ಡಾ. ಹರ್ಷಕುಮಾರ್, ಪ್ರೊ. ಅರುಣ್ ಕುಮಾರ್ , ನಾಗೇಂದ್ರಹೆಬ್ಬಾರ್, ಭರತ್‌ಕುಮಾರ್, ಆರ್.ಮಮತಾ, ಸಿದ್ದರಾಜು, ಸುಹಾಸ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net