ಕಾಮಕಾಮೇಶ್ವರಿ ದೇವಸ್ಥಾನದಲ್ಲಿ ಏಕದಶಾವತಾರ ರುದ್ರಾಭಿಷೇಕ, ಅಮೃತೇಶ್ವರ ದೇವಸ್ಥಾನದಲ್ಲಿ ಮೃತ್ಯುಂಜಯ ಹೋಮ, ಪಂಚಾಮೃತಾಭಿಷೇಕ, ರುದ್ರಾಭಿಷೇಕಗಳು ನಡೆದವು. ತ್ರಿನೇಶ್ವರ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿದ ಕಾರಣ ಅರಮನೆ ಸುತ್ತ ವಾಹನ ಸಂಚಾರ ಹೆಚ್ಚಿದ್ದರಿಂದ ಸಂಚಾರ ಪೊಲೀಸರು ಅರಮನೆ ದ್ವಾರಗಳ ಬಳಿ ನಿಂತು ಭಕ್ತರಿಗೆ ದರ್ಶನಕ್ಕೆ ಸಹಕಾರ ನೀಡಿದರು. ಅರಮನೆ ಮುಖ್ಯದ್ವಾರದಿಂದಲೂ ಭಕ್ತರಿಗೆ ಪ್ರವೇಶಾವಕಾಶ ಕಲ್ಪಿಸಲಾಗಿತ್ತು.