ಚಂದ್ರಶೇಖರ್ ಜಮೀನಿನಲ್ಲಿ ಮೃತ ನಿಂಗೇಗೌಡ ಅವರು ಕುರಿಗಳನ್ನು ಮೇಯಿಸುತ್ತಿದ್ದರು. ಜತೆಗೆ ಅಲ್ಲಿನ ತೆಂಗಿನ ಕಾಯಿಗಳನ್ನು ಕಿತ್ತು ಕೊಂಡು ಹೋಗುತ್ತಿದ್ದರು ಎಂದು ಚಂದ್ರಶೇಖರ್ ಆಕ್ಷೇಪ ವ್ಯಕ್ತಪಡಿಸಿ ಜಮೀನಿನ ಬಳಿ ಬಾರದಂತೆ ಎಚ್ಚರಿಕೆ ನೀಡಿದ್ದರು. ಆದರೂ, ಗುರುವಾರ ಮೃತ ನಿಂಗೇಗೌಡ ಅವರು ಚಂದ್ರಶೇಖರ್ ಅವರ ಜಮೀನಿನಲ್ಲಿ ಕುರಿಗಳನ್ನು ಮೇಯಿಸುತ್ತಿದ್ದರು. ಇದನ್ನು ಕಂಡ ಚಂದ್ರಶೇಖರ್ ನಿಂಗೇಗೌಡ ಅವರ ಮೇಲೆ ದೊಣ್ಣೆ ಮತ್ತು ಮಚ್ಚಿನಿಂದ ಹಲ್ಲೆ ನಡೆಸಿದ್ದರು. ಘಟನೆಯಿಂದ ಗಾಯಗೊಂಡಿದ್ದ ನಿಂಗೇಗೌಡ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ರಾತ್ರಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.