ಸಾಮಾಜಿಕ ಕಳಕಳಿಯೇ ಶಾಂತಮಲ್ಲಿಕಾರ್ಜುನ ಶ್ರೀ ಹಿರಿಮೆ

ತಿ.ನರಸೀಪುರ ಪಟ್ಟಣದ ಹೆಳವರಹುಂಡಿಯಲ್ಲಿ ಆಯೋಜಿಸಿದ್ದ ಮಡ್ರಳ್ಳಿ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ವರ್ಧಂತ್ಯುತ್ಸವ ಹಾಗೂ ಗುರುವಂದನಾ ಕಾರ್ಯಕ್ರಮವನ್ನು ವಾಟಾಳು ಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ಶ್ರೀ ರಾಜಶೇಖರ ಸ್ವಾಮೀಜಿ, ಸಿದ್ದಪ್ಪ, ಪುಟ್ಟಬುದ್ದಿ, ಸದಾಶಿವಮೂರ್ತಿ, ಪಿ.ನಟರಾಜು ಇತರರು ಇದ್ದರು.
ತಿ.ನರಸೀಪುರ ಪಟ್ಟಣದ ಹೆಳವರಹುಂಡಿಯಲ್ಲಿ ಆಯೋಜಿಸಿದ್ದ ಮಡ್ರಳ್ಳಿ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ವರ್ಧಂತ್ಯುತ್ಸವ ಹಾಗೂ ಗುರುವಂದನಾ ಕಾರ್ಯಕ್ರಮವನ್ನು ವಾಟಾಳು ಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ಶ್ರೀ ರಾಜಶೇಖರ ಸ್ವಾಮೀಜಿ, ಸಿದ್ದಪ್ಪ, ಪುಟ್ಟಬುದ್ದಿ, ಸದಾಶಿವಮೂರ್ತಿ, ಪಿ.ನಟರಾಜು ಇತರರು ಇದ್ದರು.
Published on

ತಿ.ನರಸೀಪುರ:

ಹರಗುರು ಚರಮೂರ್ತಿಗಳ ಸಾತ್ವಿಕ ಕೋಪವು ಭಕ್ತರ ಮೇಲಿನ ಕಾಳಜಿ ಹಾಗೂ ಜವಾಬ್ದಾರಿ ಬಿಂಬಿಸುತ್ತದೆ. ಸ್ವಾಮೀಜಿಗಳ ಸಾತ್ವಿಕ ಕೋಪವು ವ್ಯಕ್ತಿಯ ವ್ಯಕ್ತಿತ್ವದ ಪರಿವರ್ತನೆಗೆ ನಾಂದಿಯಾಗುತ್ತದೆ ಎಂದು ವಾಟಾಳು ಮಠದ ಶ್ರೀ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ನುಡಿದರು.

ಪಟ್ಟಣದ ಹೆಳವರಹುಂಡಿಯಲ್ಲಿ ಬುಧವಾರ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಶಿಕ್ಷಣ ಸಂಸ್ಥೆಯಿಂದ ಆಯೋಜಿಸಿದ್ದ ಮಾಡ್ರಹಳ್ಳಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ 74ನೇ ವರ್ಧಂತ್ಯುತ್ಸವ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ, ತ್ಯಾಗ, ಕಾಯಕ ಹಾಗೂ ಸಾಮಾಜಿಕ ಕಳಕಳಿಯೇ ಸ್ವಾಮೀಜಿ ಅವರ ಬದುಕಿನ ಹಿರಿಮೆಯಾಗಿದೆ ಎಂದು ಬಣ್ಣಿಸಿದರು.
ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಅವರು ಕ್ರಿಯಾಶೀಲತೆ, ಕಠಿಣ ಪರಿಶ್ರಮ ಹಾಗೂ ಬದ್ಧತೆಗೆ ಹೆಸರುವಾಸಿಯಾಗಿದ್ದಾರೆ ಎಂದು ತಿಳಿಸಿದರು.
ಜೆಎಸ್‌ಎಸ್ ವಿಶ್ರಾಂತ ಪ್ರಾಧ್ಯಾಪಕ, ದೇವನೂರು ಮಠದ ಸದಾಶಿವಮೂರ್ತಿ ಮಾತನಾಡಿ, ಬಿಎಸ್ಸಿ, ಬಿಎಡ್ ಪದವೀಧರರಾಗಿದ್ದರೂ ಸರ್ಕಾರಿ ಹುದ್ದೆಯ ಆಕರ್ಷಣೆಗೆ ಒಳಗಾಗದೆ ಗುರುಗಳ ಆಶೀರ್ವಾದದಂತೆ ಮಠದ ಉತ್ತರಾಧಿಕಾರಿಯಾಗಿ ಸನ್ಯಾಸ ಸ್ವೀಕರಿಸಿ ಐದು ದಶಕಗಳಿಗೂ ಹೆಚ್ಚು ಕಾಲ ಸಮಾಜ ಹಾಗೂ ಮಠದ ಸೇವೆಯಲ್ಲಿ ತೊಡಗಿರುವ ಶ್ರೀಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಅವರ ಬದುಕು ತ್ಯಾಗ, ಕಾಯಕ ಹಾಗೂ ಸಮರ್ಪಣೆಗೆ ಮಾದರಿಯಾಗಿದ್ದಾರೆ ಎಂದರು.

ಮುಡುಕನಪುರ ಮಠದ ಶ್ರೀ ಷಡಕ್ಷರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಶಾಂತ ಮಲ್ಲಿಕಾರ್ಜುನ ಸ್ವಾಮೀಜಿಯವರ ಕಾಯಕನಿಷ್ಠೆ, ಕಾರ್ಯತತ್ಪರತೆ ಹಾಗೂ ಶ್ರಮಶಕ್ತಿ ಎಲ್ಲರಿಗೂ ಮಾದರಿ ಎಂದರು.

ಗುರುವಂದನೆ ಸ್ವೀಕರಿಸಿ ಮಾತನಾಡಿದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಅವರು, ನನಗೆ ಸಭೆ ಹಾಗೂ ಸನ್ಮಾನ ಇಷ್ಟವಿಲ್ಲ. ಅಭಿಮಾನಿಗಳ ಒತ್ತಾಯಕ್ಕೆ ಕಟ್ಟುಬಿದ್ದು ಕಾರ್ಯಕ್ರಮಕ್ಕೆ ಒಪ್ಪಿಕೊಂಡಿದ್ದೇನೆ. ಕೆಲಸ ಕಾರ್ಯಗಳು ಆಗಬೇಕೆಂಬ ಉದ್ದೇಶದಿಂದ ಹಠಮಾರಿತನ ಮಾಡುತ್ತೇನೆಯೇ ಹೊರತು ಯಾರ ಮೇಲೂ ವೈಯಕ್ತಿಕ ಕ್ರೋಧವಿಲ್ಲ. ಭಕ್ತರ ಸಹಕಾರ ಹಾಗೂ ಸಲಹೆಗಳು ತಮ್ಮ ಕಾರ್ಯಗಳಿಗೆ ಸದಾ ಶ್ರೀರಕ್ಷೆ ಎಂದರು.
ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಹೆಳವರಹುಂಡಿ ಡಾ. ಸಿದ್ದಪ್ಪ ಮಾತನಾಡಿದರು. ಹೊಸೂರು ಹುಂಡಿ ಮಠದ ಶ್ರೀ ರಾಜಶೇಖರ ಸ್ವಾಮೀಜಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಹಿರಿಯೂರು ವೀರೇಂದ್ರ(ನವೀನ್), ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಬಿ.ಸುಗಂಧರಾಜ್, ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸೋಮಶೇಖರಪ್ಪ, ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಸಿ.ಎಂ.ಪ್ರಕಾಶ್, ಕಾರ್ಯದರ್ಶಿ ಕೆ.ವಿ.ಶಿವಶಂಕರ್, ನಿರ್ದೇಶಕ ಪಿ.ಕುಮಾರ್, ಉಪನ್ಯಾಸಕ ಮೂಗೂರು ಕುಮಾರಸ್ವಾಮಿ, ಬಸವ ಬಳಗದ ತಾಲೂಕು ಅಧ್ಯಕ್ಷ ಪರಮೇಶ್ ಪಟೇಲ್, ಪುರಸಭೆ ಮಾಜಿ ಸದಸ್ಯೆ ರೂಪಶ್ರೀ ಪರಮೇಶ್, ಆಲಗೂಡು ಪಿಎಸಿಸಿಎಸ್ ಅಧ್ಯಕ್ಷ ಹೆಳವರಹುಂಡಿ ಪಿ.ನಟರಾಜು, ಕಸಬಾ ಪ್ಯಾಕ್ಸ್ ಅಧ್ಯಕ್ಷ ಮಲ್ಲಣ್ಣ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ದಯಾನಂದ್ ಪಟೇಲ್, ಕ್ಷೇತ್ರಾಧ್ಯಕ್ಷ ಹಿರಿಯೂರು ಶಿವಕುಮಾರ್, ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ತೊಟ್ಟವಾಡಿ ರವಿ, ಪಿ ಕಾರ್ಡ್ ಬ್ಯಾಂಕ್ ನಿರ್ದೇಶಕ ಎಂ.ಎಸ್.ಶಿವಮೂರ್ತಿ, ಮುಖಂಡರಾದ ಪುಟ್ಟಬುದ್ದಿ, ಬಿ.ಮಂಟೇಲಿಂಗಪ್ಪ, ಮಂಜುನಾಥ್, ಕೆಬ್ಬೆಹುಂಡಿ ಮಾಯಪ್ಪ, ಬಸಪ್ಪ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net