ಅಧಿಕಮಾಸದ ಆಮಂತ್ರಣ ಪತ್ರಿಕೆ ವಿತರಣೆ ಸಭೆ

ಶ್ರೀ  ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ
ಶ್ರೀ ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ ವೆಂಕಟೇಶ್ವರ ಧ್ಯಾನಕೇಂದ್ರದಲ್ಲಿ ಏ. 14ರ ಸಂಜೆ 6ಕ್ಕೆ ಸಭೆ
  • ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿಯವರ ಅಧಿಕ ಜ್ಯೇಷ್ಠ ಮಾಸದ ಕಾರ್ಯಕ್ರಮ
ಮೈಸೂರು: ಮುಂಬರುವ ಮೇ 17ರಿಂದ ಜೂನ್ 15ರ ವರೆಗೆ ನಗರದ ಅಗ್ರಹಾರದಲ್ಲಿರುವ ಧನ್ವಂತರಿ ಸನ್ನಿಧಾನದಲ್ಲಿ ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನ ಶ್ರೀ ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿಯವರ ಅಧಿಕ ಜ್ಯೇಷ್ಠ ಮಾಸದ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ. ವೈಭವಪೂರ್ಣವಾಗಿ ನೆರವೇರುವ ಈ ಕಾರ್ಯಕ್ರಮವನ್ನು ಶ್ರೀ ಮೂಲರಾಮ ದೇವರಿಗೆ ಮತ್ತು ಗುರುಗಳಿಗೆ ಸಮರ್ಪಣೆ ಮಾಡಲು ವಿವಿಧ ಸಮಿತಿಗಳನ್ನು ರಚನೆ ಮಾಡಿದ್ದು, ಸಿದ್ಧತೆ ಭರದಿಂದ ಸಾಗಿದೆ. ಒಂದು ತಿಂಗಳ ಪರ್ಯಂತ ಹತ್ತಾರು ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ವೇದಿಕೆಯಲ್ಲಿ ವಿಜೃಂಭಿಸಲಿದೆ.
ಈ ಹಿನ್ನೆಲೆಯಲ್ಲಿ ಭಕ್ತ ಸಮೂಹಕ್ಕೆ ಆಮಂತ್ರಣ ಪತ್ರ ವಿತರಣೆ ಮತ್ತು ಮಾಹಿತಿ ನೀಡುವ ಸಭೆಯನ್ನು ಶ್ರೀರಾಮಪುರದ ಉತ್ತರಾದಿ ಮಠದ ಶಾಖೆಯಾದ ಶ್ರೀ ವೆಂಕಟೇಶ್ವರ ಧ್ಯಾನಕೇಂದ್ರದಲ್ಲಿ ಏ. 14ರ ಸಂಜೆ 6ಕ್ಕೆ ಆಯೋಜನೆ ಮಾಡಲಾಗಿದೆ. ಪಂಡಿತರಾದ ಅನಿರುದ್ಧಾಚಾರ್ಯ ಪಾಂಡುರಂಗಿ, ಹೇಮಂತ ಆಚಾರ್ಯ ಗುಡಿ ಮಾಹಿತಿ ನೀಡಲಿದ್ದಾರೆ. ಭಕ್ತರು ಆಗಮಿಸಬೇಕು ಎಂದು ಹಿರಿಯ ಕಾರ್ಯಕರ್ತರಾದ ಎ.ಎನ್. ರಮೇಶ್ ಕೋರಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net