ಸಂಸ್ಕೃತ, ಶಾಸ್ತ್ರಗಳು ಹಾಗೂ ಸಂಬಂಧಿತ ವಿಷಯಗಳನ್ನು ಕಲಿಯಲು ಆಸಕ್ತಿ ಇರುವ ಯಾರು ಬೇಕಾದರೂ ಈ ಕೋರ್ಸ್‌ಗಳಿಗೆ ಸೇರಬಹುದಾಗಿದೆ. ಸಂಸ್ಕೃತ ಡಿಪ್ಲೋಮಾ ಕೋರ್ಸ್ ಆರು ತಿಂಗಳು ಅಥವಾ ಒಂದು ವರ್ಷದ ಸರಳ ಕೋರ್ಸ್ ಅಗಿದ್ದು, ಸಂಸ್ಕೃತ ಸಂಭಾಷಣೆ, ವ್ಯಾಕರಣ ಮತ್ತು ನಮ್ಮ ಸಂಸ್ಕೃತಿಯ ಮೂಲ ಜ್ಞಾನವನ್ನು ಒದಗಿಸುತ್ತದೆ ಎಂದು ಸ್ವಾಮೀಜಿ ತಿಳಿಸಿದರು.