ನಯವಾದ, ಕ್ಯಾಬೋಚನ್- ಕಟ್ ಕಲ್ಲುಗಳ ಬಳಕೆಯು ಆಭರಣಗಳಿಗೆ ಒಂದು ಸುಂದರವಾದ ಶಿಲ್ಪಕಲೆಯ ರೂಪ ಮತ್ತು ಹೊಳಪನ್ನು ನೀಡುತ್ತದೆ. ಹಾಗೆಯೇ, ಪದರಗಳಲ್ಲಿನ ಬಣ್ಣಗಳ ಸಂಯೋಜನೆ ಮತ್ತು ಬಂಚ್ ಮಾಡುವ ಪ್ರಕ್ರಿಯೆ ಹಾಗೂ ಸ್ಲೈಸಿಂಗ್ ನಂತಹ ತಂತ್ರಜ್ಞಾನಗಳು ಆಭರಣಗಳಿಗೆ ಹೆಚ್ಚಿನ ಸೊಗಸು, ಆಕರ್ಷಕ ವಿನ್ಯಾಸ ಮತ್ತು ಸೊಬಗನ್ನು ನೀಡುತ್ತವೆ. ಇದರ ಫಲವಾಗಿ, ಈ ಆಭರಣಗಳು ಕ್ರಿಯಾಶೀಲವಾಗಿ ಮತ್ತು ವಿಶಿಷ್ಟವಾಗಿ ಆಧುನಿಕವಾಗಿ ಕಂಡುಬರುತ್ತವೆ. ಪಚ್ಚೆ, ಅಮೆಥಿಸ್ಟ್, ಸಿಟ್ರಿನ್, ಟೂರ್ಮಲಿನ್ ಮತ್ತು ಟಾಂಜಾನೈಟ್ ಸೇರಿದಂತೆ ಆಯ್ದ ನೈಸರ್ಗಿಕ ವರ್ಣರಂಜಿತ ರತ್ನಗಳನ್ನು ಇಲ್ಲಿ ಒಟ್ಟುಗೂಡಿಸಲಾಗಿದೆ. ಪ್ರತಿಯೊಂದು ಕಲ್ಲನ್ನು ಪರಿಣಿತರ ಮೂಲಕ ಮೂಲದಿಂದಲೇ ಪಡೆಯಲಾಗಿದ್ದು, ಅವುಗಳ ಅಸಾಧಾರಣ ಬಣ್ಣ, ಸ್ಪಷ್ಟತೆ ಮತ್ತು ನೈಜ ಗುಣಲಕ್ಷಣಗಳಿಗಾಗಿ ಕಠಿಣ ಗುಣಮಟ್ಟದ ಮಾನದಂಡಗಳ ಮೂಲಕ ಆಯ್ಕೆ ಮಾಡಲಾಗಿದೆ. ಇದು ಈ ಸಂಗ್ರಹಕ್ಕೆ ಅಪರೂಪದ ಮತ್ತು ವಿಶ್ವಾಸಾರ್ಹತೆಯ ಭಾವವನ್ನು ನೀಡುವ ಜೊತೆಗೆ, ದೈನಂದಿನ ಬಳಕೆಗೆ ಬೇಕಾದ ಸೌಂದರ್ಯ ಒದಗುವಂತೆ ಮತ್ತು ಬಾಳಿಕೆ ಬರುವಂತೆ ನೋಡಿಕೊಳ್ಳುತ್ತದೆ. ಈ ಶ್ರೇಣಿಯು ವಿಶೇಷ ಸಂದರ್ಭಗಳಿಗಾಗಿ ಭವ್ಯವಾದ ನೆಕ್ ಪೀಸ್ ಹಾಗೂ ಬಳೆಗಳನ್ನು ಒಳಗೊಂಡಿದ್ದು, ಇದರೊಂದಿಗೆ ದೈನಂದಿನ ಸೊಬಗಿಗಾಗಿ ಹಗುರವಾದ ಕಿವಿಯೋಲೆಗಳು, ಉಂಗುರಗಳು ಮತ್ತು ಪೆಂಡೆಂಟ್ ಸೆಟ್ ಗಳ ವಿನ್ಯಾಸವನ್ನೂ ಹೊಂದಿದೆ. ಇದು ಚಿನ್ನದ ಶಾಶ್ವತ ಮೌಲ್ಯ ಮತ್ತು ಸಮಕಾಲೀನ ವಿನ್ಯಾಸದ ಸೌಂದರ್ಯವನ್ನು ಒದಗಿಸುವತ ಬಹುಮುಖಿ ಸಂಗ್ರಹವನ್ನು ನೀಡುತ್ತದೆ.