ರಾಯ್ ಡೇವಿಡ್ ಆದಿವಾಸಿಗಳಿಗೆ ಭರವಸೆ

ಹುಣಸೂರು ನಗರದ ಡೀಡ್ ಸಂಸ್ಥೆಯಲ್ಲಿ ಆಯೋಜಿಸಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಗಣ್ಯರು ಪಾಲ್ಗೊಂಡಿದ್ದರು. ಡಾ.ಎಸ್.ಶ್ರೀಕಾಂತ್, ವಿವೇಕಾನಂದ, ವಿಠಲ್ ನಾಣಾಚ್ಚಿ, ಹರ್ಷ ಇತರರಿದ್ದರು.
ಹುಣಸೂರು ನಗರದ ಡೀಡ್ ಸಂಸ್ಥೆಯಲ್ಲಿ ಆಯೋಜಿಸಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಗಣ್ಯರು ಪಾಲ್ಗೊಂಡಿದ್ದರು. ಡಾ.ಎಸ್.ಶ್ರೀಕಾಂತ್, ವಿವೇಕಾನಂದ, ವಿಠಲ್ ನಾಣಾಚ್ಚಿ, ಹರ್ಷ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಾಹಿತಿ ಡಾ.ಟಿ.ಎಸ್. ವಿವೇಕಾನಂದ ಅಭಿಪ್ರಾಯ
ಹುಣಸೂರು: ಕಾರ್ಡ್ ಸಂಸ್ಥೆಯ ಸಂಸ್ಥಾಪಕ ವಿ.ಎಸ್.ರಾಯ್ ಡೇವಿಡ್ ಆದಿವಾಸಿಗಳಲ್ಲಿ ಉತ್ತಮ ಬದುಕಿನ ಭರವಸೆಯ ಬೆಳಕನ್ನು ಮೂಡಿಸಿದ್ದರು ಎಂದು ಸಾಹಿತಿ ಡಾ.ಟಿ.ಎಸ್. ವಿವೇಕಾನಂದ ಅಭಿಪ್ರಾಯಪಟ್ಟರು.
ಇತ್ತೀಚಿಗೆ ನಿಧನರಾದ ರಾಯ್‌ಡೇವಿಡ್ ಗೌರವಾರ್ಥ ನಗರದ ಡೀಡ್ ಸಂಸ್ಥೆಯಲ್ಲಿ ಆಯೋಜಿಸಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಯ್ ಕಾಲೇಜು ಶಿಕ್ಷಣ ಮಾಡುವಾಗ ಎಡಪಂಥೀಯ ದೋರಣೆ ಮೈಗೂಡಿಸಿಕೊಂಡು, ಸಮುದಾಯ ಸಂಘಟನೆಯಲ್ಲಿ ತರಬೇತಿ ಹೊಂದಿ, ಮುಂಬೈನ ಧಾರವಿ ಬಹುದೊಡ್ಡ ಕೊಳೆಗೇರಿಯಲ್ಲಿ ಕಾರ್ಯಮಾಡಿ ಅನುಭವ ಪಡೆದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೇಣಿದಾರರ ಭೂ ಹೋರಾಟಕ್ಕೆ ಬೆಂಬಲವಾಗಿ ನಿಂತು ಧಣಿಗಳ ದೌರ್ಜನ್ಯದಿಂದ ತನ್ನ ಎಡಗೈ ಕಳೆದುಕೊಂಡರೂ. ಛಲ ಬಿಡದ ತ್ರಿವಿಕ್ರಮ ನಂತೆ ಬಡವರ ಭೂಮಿ ಹಕ್ಕಿಗೆ ಬೆಂಬಲವಾಗಿ ನಿಂತರು ಎಂದು ಸ್ಮರಿಸಿದರು.
ಅನಂತರ ಕಾರ್ಡ್ ಸಂಸ್ಥೆ ಸ್ಥಾಪಿಸಿ ಕೊಡಗಿನ ಹಾಗು ಪಿರಿಯಾಪಟ್ಟಣದ ರಾಣಿಗೆಟ್ ಆದಿವಾಸಿಗಳ ಭೂ ಹೋರಾಟಕ್ಕೆ ಆದಿವಾಸಿಗಳ ಜತೆ ನಿಂತು 600 ಎಕರೆ ಒಂದೇ ಹೋರಾಟದಲ್ಲಿ ಪಡೆದ ಯಶಸ್ಸು ಇವರದು. ನಾಗರಹೊಳೆ ತಾಜ್ ಹೋರಾಟ, ಅರಣ್ಯ ಹಕ್ಕು ಹೋರಾಟ, ದೇಶದಲ್ಲಿ ಇನ್ಸಾಫ್ ಜತೆ ಸಾಮಾಜಿಕ ನ್ಯಾಯಕ್ಕಾಗಿ ನಡೆಸಿದ ಹೋರಾಟದಲ್ಲಿ ಪಾಲ್ಗೊಂಡು, ಆದಿವಾಸಿ ಸ್ವಯಂ ಆಡಳಿತ ಹಕ್ಕಿಗೆ, ಅರಣ್ಯ ಹಕ್ಕಿಗೆ, ಸಂಘಟನೆಗೆ ಬುಡಕಟ್ಟು ಕೃಷಿಕರ ಸಂಘದ ಜತೆ ಬೆಂಬಲವಾಗಿ ನಿಂತರು. ಕೊಡಗಿನ ಎಲ್ಲ ಸಮುದಾಯಗಳೊಡನೆ ಸಾಮರಸ್ಯ ಸಾಧಿಸಿದ್ದ ರಾಯ್ ಆದಿವಾಸಿಗಳಲ್ಲಿ ಭರಸೆ ಮೂಡಿಸಿ ಸಾಕಷ್ಟು ಸ್ಥಳೀಯ ಆದಿವಾಸಿ ನಾಯಕರು ಬೆಳೆಸಿದರು. ಈ ಅಪ್ರತಿಮ ಹೋರಾಟಗಾರನ ಆತ್ಮ ಶಾಂತಿಯಲ್ಲಿ ನೆಲಸಲಿ ಎಂದರು.
ಸಭೆಯಲ್ಲಿ ಡೀಡ್ ಸಂಸ್ಥೆ ನಿರ್ದೇಶಕ ಡಾ.ಶ್ರೀಕಾಂತ್, ಗಿಡಮೂಲಿಕೆ ತಜ್ಞೆ ಮಾಸ್ತಮ್ಮ, ಆದಿವಾಸಿ ಜನತಾ ಪಾರ್ಲಿಮೆಂಟ್ ಅಧ್ಯಕ್ಷ ಹರ್ಷ, ಬೆಟ್ಟಕುರುಬ ಪಾರಂಪರಿಕ ಸಂಘದ ಪ್ರಮುಖ ಬಿ ಎಸ್ ವಿಠಲ್ ಮಾತನಾಡಿದರು.
ಆದಿವಾಸಿ ಮಹಿಳಾಸಂಘದ ಅಧ್ಯಕ್ಷೆ ಲಕ್ಷ್ಮೀ, ಮಾನವ ಮಂದಿರದ ಶ್ರೀಕಂಠು, ಶಾರದಾವಳಗೆರೆ ಪ್ರಕಾಶ್, ವಿಜಯಗಿರಿ ಭೂಮಿದಾರರ ಅಧ್ಯಕ್ಷ ಬಸವರಾಜು ಭೀಮನಹಳ್ಳಿ ರಾಜಣ್ಣ, ಅರಣ್ಯ ಹಕ್ಕು ಸಮಿತಿಗಳ ಒಕ್ಕೂಟದ ಸಂಚಾಲಕ ಶಿವಣ್ಣ, ಮಾದಯ್ಯನಕಟ್ಟೆ ರಾಜು ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net